Top

ಯಾವಾಗ ಸಾಯುತ್ತೇನೋ ಗೊತ್ತಿಲ್ಲ: ಕುಮಾರಸ್ವಾಮಿ

ಯಾವಾಗ ಸಾಯುತ್ತೇನೋ ಗೊತ್ತಿಲ್ಲ: ಕುಮಾರಸ್ವಾಮಿ
X

ಇಸ್ರೇಲ್​ನಲ್ಲಿ ಇರುವಾಗಲೇ ನಾನು ಸಾಯಬೇಕಿತ್ತು. ಆದರೆ ಬುದುಕಿ ಬಂದೆ. ಮತ್ತೆ ಯಾವಾಗ ಸಾಯುತ್ತೇನೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಪರ ಮಳವಳ್ಳಿಯಲ್ಲಿ ಜೆಡಿಎಸ್​-ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರಿಗೆ ನಾನು ಕೊಟ್ಟ ಯಾವುದೇ ಮಾತನಿಂದ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಈಡೇರಿಸುವುದಿಲ್ಲ ಎಂದರು.

ನಾನಿರುವವರೆಗೂ ನನ್ನ ನಂಬಿದ ಜನರನ್ನ ಉಳಿಸಲು ಪ್ರಯತ್ನಿಸುತ್ತೇನೆ. ಜನರ ಹಣ ಕೊಳ್ಳೆ ಹೊಡೆದು ಹೋಗುವ ದರಿದ್ರ ನನಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ ಬಗ್ಗೆ ಅಭಿಮಾನ ಇಲ್ಲದ ಬಿಜೆಪಿ ಯಾವ ಮುಖ ಹೊತ್ಕೊಂಡು ಮತ ಕೇಳುತ್ತಿದ್ದಾರೆ. ಶಿವರಾಮೇಗೌಡ ವ್ಯಕ್ತಿ ಅಷ್ಟೆ. ಅವರಿಗಲ್ಲ ನೀವು ಮತ ಹಾಕುವುದು. ನಿಮ್ಮ ಮತ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಸರ್ಕಾರಕ್ಕೆ ನೀಡುತ್ತಿರುವುದು. ಎರಡೂ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಶಿವರಾಮೇಗೌಡ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್ಸಿಗರು ವೈಯಕ್ತಿಕ ದ್ವೇಷ ಬಿಡಿ, ದೇಶ ಉಳಿಸಲು ಮತ ಕೊಡಿ. ನವೆಂಬರ್ 1ರಿಂದ ಹಿರಿಯ ನಾಗರೀಕರ ಮಾಸಾಶನ ಮಾಸಿಕ 600ರಿಂದ 1 ಸಾವಿರಕ್ಕೆ ಏರಿಕೆ ಮಾಡಲಿದ್ದೇವೆ. ನಾನು ಕೊಟ್ಟಿದ್ದ ಯಾವ ಮಾತನ್ನು ವಾಪಸ್ ತೆಗೆದುಕೊಳ್ಳಲ್ಲ. ಎಲ್ಲವನ್ನೂ ಈಡೇರಿಸ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

Next Story

RELATED STORIES