ಸಿಬಿಐ ಮುಖ್ಯಸ್ಥರ ವಿರುದ್ಧ ಭ್ರಷ್ಟಾಚಾರ ಆರೋಪ: 2 ವಾರದಲ್ಲಿ ತನಿಖೆಗೆ ಆದೇಶ

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಿರುದ್ಧದ ಸಹದ್ಯೋಗಿ ಮಾಡಿದ ಭ್ರಷ್ಟಾಚಾರ ಆರೋಪದ ಕುರಿತು ಎರಡು ವಾರದಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಂಡಿದ್ದು, ಕೇಂದ್ರ ಸರಕಾರದಿಂದ ಯಾವುದೇ ಆದೇಶ ಪಾಲಿಸುವಂತಿಲ್ಲ ಎಂದಿದ್ದಾರೆ. ವಿಚಾರಣೆಯನ್ನು ದೀಪಾವಳಿ ನಂತರ ಅಂದರೆ ನವೆಂಬರ್ 12ಕ್ಕೆ ಮುಂದೂಡಿದೆ.
ಕೇಂದ್ರ ಸರಕಾರ ಬಲವಂತದ ರಜೆ ನೀಡಿ ಕಳುಹಿಸಲಾಗಿರುವ ಅಲೋಕ್ ವರ್ಮಾ ವಿರುದ್ಧ ತುರ್ತು ತನಿಖೆ ನಡೆಸಿ ವರದಿ ನೀಡಬೇಕು. ಹಂಗಾಮಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಎನ್. ನಾಗೇಶ್ವರ್ ರಾವ್ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಸ್ತುತ ನ್ಯಾಯಾಧೀಶ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಸಬೇಕು ಹಾಗೂ ಕೇಂದ್ರ ಸರಕಾರ ಮಧ್ಯರಾತ್ರಿಯಿಂದಲೇ ರಜೆ ಮೇಲೆ ಕಳುಹಿಸಿದ ಆದೇಶ ನಂತರದ ನೀಡಿದ ಎಲ್ಲಾ ಆದೇಶ ಹಾಗೂ ಬೆಳವಣಿಗೆಗಳ ಕುರಿತು ವರದಿ ನೀಡುವಂತೆ ಸೂಚಿಸಿದೆ.