Top

ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಹಿಗ್ಗಾಮುಗ್ಗಾ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಹಿಗ್ಗಾಮುಗ್ಗಾ ವಾಗ್ದಾಳಿ
X

ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆ, ಜಮಖಂಡಿ ಮತಕ್ಷೇತ್ರದ ಸಿದ್ದಾಪುರದಲ್ಲಿ ಸಂಸದ ಪ್ರತಾಪ್ ಸಿಂಹ, ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನ ನಂಬರ್ ಒನ್ ಮಾಡಿದೆ ಎಂದು ಬೂಟಾಟಿಕೆ ಮಾತು ಹೇಳಿದರು. ಆದ್ರೆ ಜನ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸುವ ಮೂಲಕ ಸೊಕ್ಕು ಅಡಗಿಸುವ ತೀರ್ಪು ನೀಡಿದ್ದಾರೆ ಎಂದು ಹೇಳಿದರು.

ಇನ್ನು ದಿನೇಶ್ ಗುಂಡೂರಾವ್ ಬಗ್ಗೆ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಕಳೆದ ಚುನಾವಣೆಯಲ್ಲಿ ಸಚಿವ ಸಂಪುಟದ ಸಚಿವರೇ ಸೋತ್ರು. ದಿನೇಶ್ ಗುಂಡೂರಾವ್ ಕ್ಷುಲ್ಲಕ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ. ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಿದ್ರು. ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಅಪ್ಪನ ಬಳಿ ಓಡಿಹೋಗಿ , ನಿಮ್ಮ ಮಗನನ್ನೇ ಮುಖ್ಯಮಂತ್ರಿ ಮಾಡಿ ಬೇಷರತ್ ಬೆಂಬಲ ಕೊಡ್ತೀವಿ ಅಂತ ಹೇಳಿದವರ್ಯಾರು.!? ಸ್ವಾಭಿಮಾನ ಬಿಟ್ಟು ,ನಾಚಿಕೆಗೇಡಿತನದಿಂದ ಕುಳಿತುಕೊಂಡವರ್ಯಾರು ಎಂದು ಆಕ್ರೋಶಭರಿತವಾಗಿ ಪ್ರಶ್ನೆ ಮಾಡಿದ್ದಾರೆ.

ಇನ್ನು ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸು ಡಿಕೆಶಿ ತಪ್ಪೊಪ್ಪಿಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರತಾಪ್ ಸಿಂಹ, ಉಪಚುನಾವಣೆಯಲ್ಲಿ ಡಿಕೆಶಿ ಸೋಲಿನ ಭಯದಿಂದ ತಪ್ಪೊಪ್ಪಿಕೊಳ್ಳುವ ನಾಟಕ ಮಾಡ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಧರ್ಮ ವಿರೋಧಿ ಕೆಲಸ ಮಾಡಿದವರಿಗೆ ಜನ ಸರಿಯಾಗಿ ಪಾಠ ಕಲಿಸಿದ್ದಾರೆ. ಉಪಚುನಾವಣೆಯಲ್ಲೂ ಜನತೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸ್ತಾರೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಪರ ಬ್ಯಾಟಿಂಗ್ ಮಾಡಿದರು. ನಾನು ಸಂಸದನಾದ ಮೇಲೆ ಎದೆ ಮುಟ್ಟಿ ಹೇಳ್ತೇನೆ. ಯಾವ ಪೊಲಿಟಿಷನ್ ಹೇಳ್ತಾರೆ ಗೊತ್ತಿಲ್ಲ. ಒಂದು ರೂಪಾಯಿ ಪುಕ್ಕಟೆಯಾಗಿ ಚಹಾ ಕುಡಿದಿಲ್ಲ. ನಾನು ಇವತ್ತು ಕೆಲಸ ಮಾಡ್ತಿದ್ದೇನೆ.

ಈ ರೀತಿ ಕೆಲಸ ಮಾಡೋದಕ್ಕೆ ಪ್ರಧಾನಿ ಮೋದಿಯವರು ಮೈಸೂರಿಗೆ 11 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಹತ್ತಾರು ಯೋಜನೆ ಮೈಸೂರಿಗೆ ತರಲಾಗಿದೆ. ಹೈವೇ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ.

Next Story

RELATED STORIES