Top

ಅನೈತಿಕ ಸಂಬಂಧ: ಮಹಿಳೆಯ ಬರ್ಬರ ಕೊಲೆ

ಅನೈತಿಕ ಸಂಬಂಧ: ಮಹಿಳೆಯ ಬರ್ಬರ ಕೊಲೆ
X

ಬೆಂಗಳೂರು: ಅನೈತಿಕ ಸಂಬಂಧ ಹಿನ್ನಲೆ ಮಚ್ಚಿನಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ರುಕ್ಮಿಣಿ ಅಂತ ಗುರುತಿಸಲಾಗಿದೆ.

ನಗರದ ಆರ್ ಎಂಸಿ ಯಾರ್ಡ್ ಬಳಿಯ ಗುರಗುಂಟೆಪಾಳ್ಯದ ಹೆಚ್‌ಎಂಟಿ ವಾರ್ಡನಲ್ಲಿ ರುಕ್ಮಿಣಿ ಹಲವು ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು. ಮೂಲತಃ ಮಧುಗಿರಿಯ ರುಕ್ಮಿಣಿಗೆ 20 ವರ್ಷದ ಹಿಂದೆ ನಾರಯಣಾ ಸ್ವಾಮಿ ಜೊತೆ ಮದುವೆಯಾಗಿತ್ತು .

ಮದುವೆ ಬಳಿಕ ಹೊಂದಾಣಿಕೆ ಇಲ್ಲದ್ದರಿಂದ ಗಂಡನನ್ನು ಬಿಟ್ಟು ಬಂದು ಬೆಂಗಳೂರಿನಲ್ಲಿ ಸಾಯಿ ಗಾರ್ಮೆಂಟ್ಸ್ ಗೆ ಸೇರಿದ್ರು‌. ಅಲ್ಲಿಯೇ ಕೆಲಸ ಮಾಡ್ತಾ ಸೂಪರ್ವೈಸರ್ ಆಗಿ ಬಡ್ತಿ ಸಹ ಸಿಕ್ಕಿತ್ತು. ತಿಂಗಳಿಗೆ 22 ಸಾವಿರ ಸಂಬಳ ಕೂಡ ಬರುತ್ತಿತ್ತು.

ಆದ್ರೆ ಒಂಟಿಯಾಗಿದ್ದ ರುಕ್ಮಿಣಿ ಮೇಲೆ ಹಲವರ ಕಣ್ಣು ಬಿದಿತ್ತು .ಹೀಗೆ ಗಾರ್ಮೆಂಟ್ಸ್‌ನಲ್ಲೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಪರಿಚಯವಿತ್ತು. ಆತನೊಂದಿಗೆ ಸಲುಗೆ ಕೂಡ ಬೆಳೆದಿತ್ತು. ಆಗಾಗ ರುಕ್ಮಿಣಿ ಇದ್ದ ಮನೆಗೆ ಬಂದು ಹೋಗುತ್ತಿದ್ದ,ಆತನೊಂದಿಗೆ ರುಕ್ಮಿಣಿಗೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಶಂಕೆ ಕೂಡ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬಂದಿರೋ ಆ ಅಪರಿಚಿತ ವ್ಯಕ್ತಿ ಹಾಗೂ ರುಕ್ಮಿಣಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ.ಬಳಿಕ ರುಕ್ಮಿಣಿ ತಲೆಗೆ ಬಲವಾಗಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಈ ವೇಳೆ ಗ್ಯಾಸ್ ಸ್ಟವ್ ಉರಿಯುತ್ತಿತ್ತು ಹಾಗೂ ಟಿವಿ ಕೂಡ ಆನ್ ಆಗಿದೆ.

ಇಂದು ರುಕ್ಮಿಣಿ ಅಕ್ಕ ಕಾಲ್ ಮಾಡಿದ್ದಾರೆ. ಮೊಬೈಲ್ ಆಫ್ ಆಗಿರೋದನ್ನು ಕಂಡು ನೋಡ್ಕೊಂಡು ಬರಲು ಸಂಬಂಧಿಕರಿಗೆ ತಿಳಿಸಿದ್ರು. ಆತ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Next Story

RELATED STORIES