Top

ಲೈಂಗಿಕ ಕಿರುಕುಳ: ಗೂಗಲ್​ನ 13 ಹಿರಿಯ ಅಧಿಕಾರಿಗಳ ವಜಾ

ಲೈಂಗಿಕ ಕಿರುಕುಳ: ಗೂಗಲ್​ನ 13 ಹಿರಿಯ ಅಧಿಕಾರಿಗಳ ವಜಾ
X

ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ನೀಡಿದ್ದು ಹಾಗೂ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಗೂಗಲ್​ನ 13 ಹಿರಿಯ ಅಧಿಕಾರಿಗಳು ಸೇರಿದಂತೆ 48 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಗೂಗಲ್ ಆಡಳಿತ ಮಂಡಳಿ, ದೂರು ಕೇಳಿ ಬಂದ ಉದ್ಯೋಗಿಗಳಿಗೆ ನೋಟೀಸ್ ಜಾರಿ ಮಾಡಿದೆ ಎಂದು ಗೂಗಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ಪಿಚಾಯಿ ತಿಳಿಸಿದ್ದಾರೆ.

ಆ್ಯಂಡ್ರಾಯ್ಡ್ ಮೊಬೈಲ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ ಆ್ಯಂಡಿ ರುಬೆನ್​ 2014ರಲ್ಲಿ ಸಂಸ್ಥೆ ತೊರೆದಿದ್ದರು. ಆದರೆ ಅವರ ಅವಧಿಯಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದಿದ್ದವು ಎಂದು ಅಮೆರಿಕದ ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. ಉದ್ಯೋಗ ತೊರೆದ ನಂತರವೂ ರುಬೆನ್ ಅವರ ಪ್ರತ್ಯೇಕ ಕಂಪನಿಗೆ ಗೂಗಲ್ ಸಾಕಷ್ಟು ಹಣಕಾಸಿನ ನೆರವು ಕೂಡ ನೀಡಿತ್ತು.

ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ ಸಂಸ್ಥೆಯ ನೌಕರರಿಗೆ ಮೊಮೆ ಜಾರಿಗೊಳಿಸಿದ್ದು, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಮುಂತಾದ ಆರೋಪ ಬಂದರೆ ಕೂಡಲೇ ಉದ್ಯೋಗದಿಂದ ತೆರವು ಮಾಡುವುದಾಗಿ ಎಚ್ಚರಿಸಿದೆ.

Next Story

RELATED STORIES