Top

ಕುಮಾರಸ್ವಾಮಿ ಗೂಂಡಾ ಸಿಎಂ: ಈಶ್ವರಪ್ಪ

ಕುಮಾರಸ್ವಾಮಿ ಗೂಂಡಾ ಸಿಎಂ: ಈಶ್ವರಪ್ಪ
X

ಬಳ್ಳಾರಿ: ಬಳ್ಳಾರಿಯಲ್ಲಿ ಚುನಾವಣಾ ಕಣ ಕಾವೇರಿದ್ದು, ಕೂಡ್ಲಗಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ರಾಮುಲು ಪ್ರಚಾರ ಮಾಡಿದ್ರೆ ಬಳ್ಳಾರಿ ನಗರ ಮತ್ತು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಈಶ್ವರಪ್ಪ ಪ್ರಚಾರಕ್ಕಿಳಿದಿದ್ದಾರೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಮೋಟಮ್ಮ, ರಾಣಿ ಸತೀಶ್, ಯು.ಟಿ.ಖಾದರ್ ಪ್ರಚಾರ ನಡೆಸಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಈಶ್ವರಪ್ಪ, ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್- ಜೆಡಿಎಸ್ ಗುದ್ದಾಡಿಕೊಂಡಿದ್ರು. ಸಿದ್ದರಾಮಯ್ಯ ಹೆಚ್.ಡಿ.ಕೆ ಅವರಪ್ಪನಾಣೆಗೂ ಸಿಎಂ ಆಗಲ್ಲ ಅಂದಿದ್ರು. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಹೆಚ್ಡಿಕೆ ಪೌರುಷ ತೋರಿಸಿದ್ದರು ಎಂದು ಹೇಳಿದ್ದಾರೆ.

ಅಲ್ಲದೇ ಹೆಚ್ಡಿಕೆ, ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ ಈಶ್ವರಪ್ಪ, ಹೆಚ್ಡಿಕೆಯದ್ದು ಉತ್ತರಕುಮಾರನ ಪೌರುಷ, ಸಿದ್ದರಾಮಯ್ಯ ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಸ್ವಯಂಘೋಷಿತ ಮುಖ್ಯಮಂತ್ರಿಯಾಗಿದ್ದು ಸಿದ್ದು, ದಿನೇಶ್ ಗುಂಡೂರಾವ್ ಹೇಳಿಕೆಗೆ ಯಾರು ಮೂಸಿ ನೋಡಲ್ಲ. ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ಹೆಣ ಕೂಡಾ ಹೋಗಲ್ಲ ಎಂದು ಹೇಳಿದ್ದಾರೆ.

Next Story

RELATED STORIES