ಮಾನನಷ್ಟ ಮೊಕದ್ದಮೆ: ಶ್ರುತಿ ಹರಿಹರನ್ ಗೆ ಕೋರ್ಟ್ ನೋಟಿಸ್

X
TV5 Kannada26 Oct 2018 12:37 PM GMT
ಮೀಟೂ ಅಭಿಯಾನದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಹಿರಿಯ ನಟ ಅರ್ಜುನ್ ಸರ್ಜಾ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿರುವ ನ್ಯಾಯಾಲಯ, ನಟಿ ಶ್ರುತಿ ಹರಿಹರನ್ಗೆ ನೋಟಿಸ್ ಜಾರಿ ಮಾಡಿದೆ.
ಅರ್ಜುನ್ ಸರ್ಜಾ ಪರ ಧ್ರುವ ಸರ್ಜಾ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮಂಡೊನ್ಸಾ, ಪ್ರಕರಣದಲ್ಲಿ ಶ್ರುತಿ ಹರಿಹರನ್ ವಾದವನ್ನೂ ಆಲಿಸಿದ ನಂತರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.
ಅರ್ಜುನ್ ಸರ್ಜಾ ಅವರು ಸಲ್ಲಿಸಿದ ಮೊಕದ್ದಮೆ ಬಗ್ಗೆ ಮಾಹಿತಿ ಇರಲಿಲ್ಲ. ಇಂದು ಅವರು ಚೆನ್ನೈಗೆ ತೆರಳಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಶ್ರುತಿ ಪರ ವಕೀಲರು ವಾದಿಸಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದ್ದು, ಶ್ರುತಿ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಲು ಅವಕಾಶ ನೀಡಿದೆ.
Next Story