Top

ಸೆಲ್ಫಿ ತೆಗೆಯುವ ನೆಪದಲ್ಲಿ ಜಗನ್​ ಮೋಹನ್ ರೆಡ್ಡಿಗೆ ಚಾಕು ಇರಿತ

ಸೆಲ್ಫಿ ತೆಗೆಯುವ ನೆಪದಲ್ಲಿ ಜಗನ್​ ಮೋಹನ್ ರೆಡ್ಡಿಗೆ ಚಾಕು ಇರಿತ
X

ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಭಿಮಾನಿಯೊಬ್ಬ ವೈಎಸ್​ಆರ್​ ಜಗಮೋಹನ್ ರೆಡ್ಡಿಗೆ ಚಾಕು ಇರಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಜರುಗಿದೆ.

ವಿಶಾಖಪಟ್ಟಣದಿಂದ ಹೈದರಾಬಾದ್​ಗೆ ತೆರಳಲು ಜಗನ್ ಮೋಹನ್ ರೆಡ್ಡಿ ವಿಮಾನ ನಿಲ್ದಾಣದ ಬಳಿ ಆಗಮಿಸಿದ್ದಾಗ ಈ ಘಟನೆ ನಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವಿಶಾಖಪಟ್ಟಣದ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಜಗನ್ ಮೋಹನ್ ರೆಡ್ಡಿ ಸಮೀಪ ಬಂದ ಅಪರಿಚಿತ ವ್ಯಕ್ತಿ ಚಾಕುವಿನಿಂದ ಭುಜಕ್ಕೆ ಇರಿದಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಜಗನ್ ಮೋಹನ್ ಅವರನ್ನು ರಕ್ಷಿಸಿದ್ದಾರೆ.

ಭುಜದಲ್ಲಿ ರಕ್ತಸ್ರಾವ ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೈದರಾಬಾದ್​ಗೆ ಜಗನ್ ಮೋಹನ್ ರೆಡ್ಡಿ ಮರಳಿದ್ದಾರೆ.

ಮಾಜಿ ಮುಖ್ಯಮಂತ್ರಿ ರಾಜಶೇಖರ್​ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದು, ಮುಂಬರುವ ಚುನಾವಣೆಯಲ್ಲಿ ಅನುಕಂಪ ಪಡೆಯುವ ಉದ್ದೇಶದಿಂದ ಈ ನಾಟಕ ಮಾಡಲಾಗಿದೆ ಎಂಬ ಅರೋಪ ಕೇಳಿ ಬಂದಿದೆ.

Next Story

RELATED STORIES