Top

ರೌಡಿಸಂ ಮಾಡಲು ಹೋದ ಚೈತ್ರಾ ಕುಂದಾಪುರಕ್ಕೆ ಬುದ್ದಿ ಕಲಿಸಿದ ಗ್ರಾಮಸ್ಥರು!

ರೌಡಿಸಂ ಮಾಡಲು ಹೋದ ಚೈತ್ರಾ ಕುಂದಾಪುರಕ್ಕೆ ಬುದ್ದಿ ಕಲಿಸಿದ ಗ್ರಾಮಸ್ಥರು!
X

ಮಂಗಳೂರು: ಫೇಸ್‌ಬುಕ್‌ನಲ್ಲಿ ಗುರು ಪ್ರಸಾದ್ ಕಾಮೆಂಟ್ ಮಾಡಿದ್ದಕ್ಕೆ ಅವರಿಗೆ ಕಪಾಳ ಮೋಕ್ಷ ಮಾಡಿದ್ದೂ ಅಲ್ಲದೇ ಸಹಚರರಿಂದ ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ ಅವರಿಗೆ ಗ್ರಾಮಸ್ಥರೇ ಬುದ್ದಿ ಕಲಿಸಿದ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಕಾಶಿಕಟ್ಟೆ ಬಳಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಮಾಡಲಾಗಿತ್ತು ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಕಾರಿನಲ್ಲಿ ಬಂದ ಚೈತ್ರಾ ಕುಂದಾಪುರ ಮತ್ತು ಐವರು ಸಹಚರರು ಗೂಂಡಾಗಿರಿ ಮಾಡಿದ್ದು ನಂತರ ಬೆಳಕಿಗೆ ಬಂದಿತು.

ಫೇಸ್‌ಬುಕ್‌ನಲ್ಲಿ ಗುರು ಮತ್ತು ಪಂಜ ಗ್ರಾಮದ ಯುವಕರು ಕಾಮೆಂಟ್ ಮಾಡಿದ್ದಕ್ಕೆ, ಗುರು ಪ್ರಸಾದ್‌ಗೆ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದ್ದು, ಇದ್ರಿಂದ ಚೈತ್ರ ಮತ್ತು ಯುವಕರನ್ನು ಗ್ರಾಮಸ್ಥರು ಅಟ್ಟಾಡಿಸಿದ್ದರೆನ್ನಲಾಗಿದೆ.

ಇನ್ನು ಗಾಯಗೊಂಡ ಚೈತ್ರರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅಲ್ಲೂ ಕೂಡ ಚೈತ್ರಾ ರಂಪಾಟ ಮಾಡಿದ್ದಾರೆ. ಗುರು ಮತ್ತು ಚೈತ್ರಾ ಹೇಳಿಕೆ ಪಡೆಯುವಾಗ ಪೊಲೀಸರು ಚೈತ್ರಾಳ ಮೊಬೈಲ್ ಕೇಳಿದ್ದು, ನನ್ ಮೊಬೈಲ್ ನಿಮಗೇಕೆ? ಅದರಲ್ಲಿ ಹುಡುಗಿಯರ ನಂಬರ್ ಇದೆ. ನೀವು ಮಿಸ್ ಯೂಸ್ ಮಾಡಲ್ಲ ಅಂತಾ ಏನು ಗ್ಯಾರೆಂಟಿ? ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಗ ವಿಚಾರಣೆಗೆ ಬೇಕು ಅಂತಾ ಗದರಿ ಚೈತ್ರಾಳ ಮೊಬೈಲ್ ಪಡೆಯಲಾಗಿದೆ.

ಇನ್ನು ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಚೈತ್ರಾ, ಗುರುಪ್ರಸಾದ್, ಸೇರಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಲ್ಲೆ ಖಂಡಿಸಿ, ಕುಕ್ಕೆ ಸುಬ್ರಮಣ್ಯ ಬಂದ್‌ಗೆ ಕರೆ ನೀಡಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಮತ್ತು ಸ್ಥಳೀಯರು ಬಂದ್‌ಗೆ ಕರೆ ನೀಡಿದ್ದಾರೆ.

Next Story

RELATED STORIES