Top

ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಹಿರಿಯ ಆರೋಗ್ಯಾಧಿಕಾರಿ

ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಹಿರಿಯ ಆರೋಗ್ಯಾಧಿಕಾರಿ
X

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯ ಟಿ.ಹೆಚ್.ಓ ಆಫೀಸಿನಲ್ಲಿ ಹಿರಿಯ ಆರೋಗ್ಯ ಸಹಾಯಕ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ.

ಹಿರಿಯ ಆರೋಗ್ಯ ಅಧಿಕಾರಿ ವಿಜಯಪ್ರಸಾದ್, ಎಫ್‌ಡಿಸಿ ಬಸವರಾಜ್ ಎಂಬುವರ ಮೇಲೆ ದೌರ್ಜನ್ಯವೆಸಗಿದ್ದು, ಗಲಾಟೆಯ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಚೇರಿಯಲ್ಲಿ ಬಸವರಾಜ್ ಎಂಬುವರನ್ನ ಎಳೆದಾಡಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಇನ್ನು ಗಲಾಟೆ ನಡೆಸಲು ಹೋದ ಸಿಬ್ಬಂದಿ ಶಿವಶಂಕರ್ ಮೇಲೂ ಸಹ ಹಲ್ಲೆಗೆ ಯತ್ನಿಸಲಾಗಿದೆ.

ನನ್ನ ಅನುಮತಿ ಇಲ್ಲದೆ ಕಚೇರಿಗೆ ಬರಬೇಡಿ ಎಂದು ಬಸವರಾಜ್‌ಗೆ ಧಮ್ಕಿ ಹಾಕಲಾಗಿದ್ದು, ಕೆಲಸದ ವಿಚಾರಕ್ಕೆ ಬಂದ್ರೆ ತಪ್ಪೇನು ಎಂದು ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಇನ್ನು ಹಲ್ಲೆಗೊಳಗಾದವರು ದೂರು ಕೊಟ್ರು ಕೂಡ ಸಿಇಓ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

Next Story

RELATED STORIES