ಏರ್ಸೆಲ್-ಮ್ಯಾಕ್ಸಿಲ್ ಪ್ರಕರಣ: ಚಿದಂಬರಂ ಅರೋಪಿ ನಂ.1

X
TV5 Kannada25 Oct 2018 10:41 AM GMT
ಏರ್ಸೆಲ್- ಮ್ಯಾಕ್ಸಿಲ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಗುರುವಾರ ಸಲ್ಲಿಸಿದ ಎರಡನೇ ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿ ನಂ.1 ಮತ್ತು ನಂ.2 ಎಂದು ಉಲ್ಲೇಖಿಸಿದೆ.
3500 ಕೋಟಿ ರೂ. ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಎರಡನೇ ದೋಷಾರೋಪಣಾ ಪಟ್ಟಿಯನ್ನು ಅಂಗೀಕರಿಸಲಾಗಿದ್ದು, ನವೆಂಬರ್ 26ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಮಾಜಿ ಕೇಂದ್ರ ಸಚಿವ ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಕಾರ್ತಿ ಚಿದಂಬರಂ ಅವರ ಮ್ಯಾನೇಜರ್ ಹಾಗೂ ಇತರೆ 9 ಮಂದಿಯನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಎರಡೂ ಸಂಸ್ಥೆಗಳು ಸೇರಿ ಆರೋಪಪಟ್ಟಿ ಸಲ್ಲಿಸಿವೆ.
Next Story