Top

ಡ್ವೈನ್ ಬ್ರಾವೊ ಕ್ರಿಕೆಟ್​ಗೆ ವಿದಾಯ: ಟಿ-20ಯಲ್ಲಿ ಮುಂದುವರಿಕೆ

ಡ್ವೈನ್ ಬ್ರಾವೊ ಕ್ರಿಕೆಟ್​ಗೆ ವಿದಾಯ: ಟಿ-20ಯಲ್ಲಿ ಮುಂದುವರಿಕೆ
X

ವೆಸ್ಟ್ ಇಂಡೀಸ್ ತಂಡದ ಆಲ್​ರೌಂಡರ್ ಡ್ವೈನ್ ಬ್ರಾವೊ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಆದರೆ ಟಿ-20 ಕ್ರಿಕೆಟ್​ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

35 ವರ್ಷದ ಡ್ವೈನ್ ಬ್ರಾವೊ ಗುರುವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ವಿದಾಯ ಪ್ರಕಟಿಸಿದರು. ಈ ಮೂಲಕ 14 ವರ್ಷಗಳ ವೃತ್ತಿಬದುಕಿಗೆ ಅಂತ್ಯ ಹಾಡಿದರೂ, ದೇಶೀಯ ಟಿ-20 ಟೂರ್ನಿಯಲ್ಲಿ ಮುಂದುವರಿಯುವುದಾಗಿ ಹೇಳಿದರು.

2004ರಲ್ಲಿ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಡ್ವೈನ್ ಬ್ರಾವೊ, ಇದುವರೆಗೆ 14 ಟೆಸ್ಟ್, 164 ಏಕದಿನ ಹಾಗೂ 66 ಟಿ-20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಅಭುದಾಬಿಯಲ್ಲಿ ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ್ದು, ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 2004 ಅಕ್ಟೋಬರ್​ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. 2010ರ ನಂತರ ಟೆಸ್ಟ್ ತಂಡದಿಂದ ಹೊರಗುಳಿದಿದ್ದರು.

ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲಾ ಮಾದರಿಯಿಂದಲೂ ಅಧಿಕೃತವಾಗಿ ನಿವೃತ್ತಿ ಹೇಳುತ್ತಿದ್ದೇನೆ. ವಿಂಡೀಸ್ ಪರ 2004 ಜುಲೈನಲ್ಲಿ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದರ್ಪಣೆ ಮಾಡಿದ್ದು ಇಂದಿಗೂ ನನಗೆ ಹಚ್ಚಹಸಿರಿನಂತೆ ನೆನಪಿನಲ್ಲಿದೆ. ಇದೇ ಸ್ಫೂರ್ತಿ ನನ್ನ ವೃತ್ತಿಜೀವನದ ಕೊನೆಯವರೆಗೂ ಕಾಪಾಡಿಕೊಂಡು ಬಂದಿತು ಎಂದು ಬ್ರಾವೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರಾವೊ ಟೆಸ್ಟ್ ಕ್ರಿಕೆಟ್​ನಲ್ಲಿ 2,200 ರನ್ ಗಳಿಸಿದ್ದು, 86 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 2968 ರನ್ ಕಲೆ ಹಾಕಿದ್ದು, 199 ವಿಕೆಟ್ ಪಡೆದಿದ್ದಾರೆ. ಟಿ-20ಯಲ್ಲಿ 1142 ರನ್ ಬಾರಿಸಿದ್ದು, 52 ವಿಕೆಟ್ ಗಳಿಸಿದ್ದಾರೆ.

Next Story

RELATED STORIES