Top

ನಟಿ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು..!

ನಟಿ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು..!
X

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಮೀ ಟೂ ಆರೋಪಕ್ಕೆ ಸಂಬಂಧಿಸಿದಂತೆ, ಅರ್ಜುನ್ ಸರ್ಜಾ ಶೃತಿ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸರ್ಜಾ ಶೃತಿ ವಿರುದ್ಧ 5 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ನಟ ಧೃವ ಸರ್ಜಾ ಮೂಲಕ ಅರ್ಜುನ್ ಸರ್ಜಾ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದು, ಈ ಮೂಲಕ ಸ್ಯಾಂಡಲ್‌ವುಡ್ನ ಮೊದಲ ಮೀ ಟೂ ಕೇಸ್ ಕೋರ್ಟ್‌ ಮೆಟ್ಟಲೇರಿದೆ.

ಅರ್ಜುನ್ ಸರ್ಜಾ ಇ-ಮೇಲ್, ಟ್ವಿಟರ್ ಹ್ಯಾಕ್..!

ಅರ್ಜುನ್ ಸರ್ಜಾ ಇ-ಮೇಲ್, ಟ್ವಿಟರ್ ಹ್ಯಾಕ್ ಮಾಡಿದ್ದಾರೆಂದು, ಅರ್ಜುನ್ ಸರ್ಜಾ ಮ್ಯಾನೇಜರ್ ವಕೀಲರ ಮೂಲಕ ಕಮೀಷನರ್ ಸುನೀಲ್ ಕುಮಾರ್‌ಗೆ ದೂರು ನೀಡಿದ್ದಾರೆ.

ಇಮೇಲ್, ಟ್ವಿಟರ್ ಹ್ಯಾಕ್ ಮಾಡಿ, ವೈಯಕ್ತಿಕ ಮಾಹಿತಿ ಕದ್ದಿದ್ದಾರೆಂದು ಆರೋಪಿಸಿದ್ದು, ಹ್ಯಾಕ್ ಮಾಡಿರುವ ದಾಖಲೆ ಮತ್ತು ಕ್ಲಿಪ್ಪಿಂಗ್ ಸಮೇತ ದೂರು ನೀಡಲಾಗಿದೆ.

ಅಲ್ಲದೇ ಟ್ವಿಟರ್ ಹ್ಯಾಕ್ ಮಾಡಿ ನಾನಾ ಮೇಲ್ ಕಳಿಸಲಾಗ್ತಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಅರ್ಜುನ್ ಸರ್ಜಾ ಮ್ಯಾನೇಜರ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಎರಡು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ರಾ ಶೃತಿ ಕಡೆಯವರು..?

ಇನ್ನು ಅರ್ಜುನಾ ಸರ್ಜಾ ಮ್ಯಾನೇಜರ್‌ಗೆ ಬಂದಿದ್ದ ಕರೆಯಲ್ಲಿ ಶೃತಿ ಕಡೆಯವರು ರಾಜಿ ಸಂಧಾನ ಮಾಡುವಂತೆ ಕಾಲ್ ಮಾಡಿದ್ದರೆಂಬ ಮಾಹಿತಿ ಹೊರಬಿದ್ದಿದೆ.

ರಾಮ್ ಎಂಬುವರು ಕಾಲ್ ಮಾಡಿದ್ದು, ಕಾಂಪ್ರೋ ಆಗೋಣ, ಒಂದುವರೆ ಕೋಟಿಯಿಂದ ಎರಡು ಕೋಟಿ ಕೊಡುವಂತೆ ಡಿಮಾಂಡ್ ಮಾಡಿದ್ದಾರೆನ್ನಲಾಗಿದೆ.

Next Story

RELATED STORIES