ನಿರ್ದೇಶಕನ ವಿರುದ್ಧ ಹೆಬ್ಬುಲಿ ನಾಯಕಿ #Me too ಆರೋಪ..!

X
TV5 Kannada25 Oct 2018 5:10 AM GMT
ಬೆಂಗಳೂರು: ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಮಲಾ ಪೌಲ್ ಮೀ ಟೂ ಆರೋಪ ಮಾಡಿದ್ದಾರೆ. ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ನಟಿ ಅಮಲಾ ಪೌಲ್ ಆರೋಪ ಮಾಡಿದ್ದಾರೆ.
ತಿರುತು ಪಾವಲೆ ನಿರ್ದೇಶಕ ಸುಶಿ ಗಣೇಶನ್ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.ಅದನ್ನ ಹೊರಗೆ ಹೇಳಿಕೊಂಡ್ರೆ ಏನಾದ್ರೂ ಮಾಡುವುದಾಗಿ ಗಣೇಶ್ ಬೆದರಿಕೆ ಹಾಕಿದ್ದರು.
ಅಲ್ಲದೇ ಚಿತ್ರೀಕರಣವಾದ ಮೇಲೆ ಡಬಲ್ ಮೀನಿಂಗ್ ಟಾಕ್ಸ್ ಮತ್ತು ಅನುಮತಿ ಇಲ್ಲದೇ ನನ್ನ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.
ಹೀಗೆ ತಮಗಾದ ಅನುಭವದ ಬಗ್ಗೆ ಅಮಲಾಪೌಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಮೊದಲು ನಿರ್ದೇಶಕಿ ಮತ್ತು ಬರಹಗಾರ್ತಿ ಲೀನಾ ಮಣಿಮೆಕಲೈ ಸುಶಿ ಗಣೇಶನ್ ಮೇಲೆ ಆರೋಪ ಮಾಡಿದ್ದರು.
ಆ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮಲಾ ಪೌಲ್ ಕೂಡ ಆತ ನನ್ನ ಬಳಿಯೂ ಅಸಭ್ಯವಾಗಿ ನಡೆದುಕೊಂಡಿದ್ದ. ನಾನು ಸಂಪೂರ್ಣವಾಗಿ ಲೀನಾ ಮಣಿಮೆಕಲೈ ಅವರಿಗೆ ಬೆಂಬಲ ಸೂಚಿಸುತ್ತೇನೆ ಎಂದಿದ್ದಾರೆ.
Next Story