Top

ಡಿಸ್ಚಾರ್ಜ್ ಆದ ಬಳಿಕ ದುನಿಯಾ ವಿಜಿ ಮಗಳು ಹೇಳಿದ್ದೇನು?

ಡಿಸ್ಚಾರ್ಜ್ ಆದ ಬಳಿಕ ದುನಿಯಾ ವಿಜಿ ಮಗಳು ಹೇಳಿದ್ದೇನು?
X

ಮೊದಲೇ ಪ್ಲಾನ್ ಮಾಡಿ ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ಹೊಡೆದಿದ್ದಕ್ಕೆ ಕೋಪ ಬಂದು ಬಾಗಿಲಿಗೆ ಕಲ್ಲಿನಲ್ಲಿ ಹೊಡೆದೆ ಎಂದು ದುನಿಯಾ ವಿಜಿ ಹಾಗೂ ಕೀರ್ತಿ ಗೌಡ ವಿರುದ್ಧ ಪುತ್ರಿ ಮೋನಿಕಾ ಆರೋಪಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದುನಿಯಾ ವಿಜಿ ಹಾಗೂ ಮೊದಲ ಪತ್ನಿ ನಾಗರತ್ನ ಅವರ ಪುತ್ರಿ ಮೋನಿಕಾ, ಬುಧವಾರ ಆಸ್ಪತ್ರೆಯಿಂದ ಹೊರ ಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮೊದಲಿನಿಂದಲೂ ಅಪ್ಪ (ದುನಿಯಾ ವಿಜಿ) ಕಿರುಕುಳ ನೀಡುತ್ತಾ ಬಂದಿದ್ದಾರೆ. ನಾವು ಹೊರಗೆ ಬಂದು ಹೇಳುವುದಕ್ಕೆ ಆಗಲಿಲ್ಲ. ಸುಮ್ಮನೇ ಪೊಲೀಸರಿಗೆ ದೂರು ಕೊಡೋಕೆ ನಂಗೆ ತಲೆ ಕೆಟ್ಟಿಲ್ಲ. ಅವರಿದ್ದ ಮನೆಗೆ ಹೋಗುವ ಮೊದಲು ತಾನು‌ ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದೇನೆ ಎಂದು ಮೋನಿಕಾ ವಿವರಿಸಿದ್ದಾರೆ.

ನಾನು ನನ್ನ ವಸ್ತುಗಳನ್ನು ತರೋದಕ್ಕೆ ವಿಜಿ ಮತ್ತು ಕೀರ್ತಿಗೌಡ ಇದ್ದ ಮನೆಗೆ ಹೋಗಿದ್ದೆ. ನಾನು ಯಾವುದೇ ಗಲಾಟೆ ಮಾಡುವುದಕ್ಕೆ ಹೋಗಿಲ್ಲ. ಆದರೆ ತಂದೆ ವಿಜಯ್ ಮತ್ತು ಕೀರ್ತಿಗೌಡ ಸೇರಿ ಐವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಎದುರಿಸಲೂ ನೋಡಿದರು ಎಂದು ಮೋನಿಕಾ ಹೇಳಿದರು.

ನನಗೆ ಗಾಯ ಆಗಿದೆ. ಹೀಗಾಗಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನೂ 2 ದಿನ ಬಿಟ್ಟು ಮತ್ತೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಮೋನಿಕಾ ನುಡಿದರು.

Next Story

RELATED STORIES