Top

10,000 ರನ್ ಪೂರೈಸಿ ಸಚಿನ್ ದಾಖಲೆ ಮುರಿದ ಕೊಹ್ಲಿ!

10,000 ರನ್ ಪೂರೈಸಿ ಸಚಿನ್ ದಾಖಲೆ ಮುರಿದ ಕೊಹ್ಲಿ!
X

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ್ದೂ ಅಲ್ಲದೇ ಅತ್ಯಂತ ವೇಗವಾಗಿ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮುರಿದರು.

ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದರು. ಇದು ಪ್ರಸಕ್ತ ಸರಣಿಯಲ್ಲಿ ಸತತ ಎರಡನೇ ಶತಕವಾಗಿದೆ. ಇದು ಕೊಹ್ಲಿ ಅವರಿಗೆ ವೃತ್ತಿಜೀವನದ 37ನೇ ಶತಕವಾಗಿದೆ.

ರನ್ ಮೆಷಿನ್ ವಿರಾಟ್​ ಕೊಹ್ಲಿ 205ನೇ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಪೂರೈಸಿದರು. ಈ ಮೂಲಕ 259 ಪಂದ್ಯಗಳಲ್ಲಿ 10 ಸಾವಿರ ರನ್ ಪೂರೈಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮುರಿದರು.

ಕೊಹ್ಲಿ 106 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ ಶತಕ ಪೂರೈಸಿದರು. ಇದರೊಂದಿಗೆ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ 2 ಶತಕ ಸಿಡಿಸಿದ್ದೂ ಅಲ್ಲದೇ ಏಕದಿನ ಕ್ರಿಕೆಟ್​ನಲ್ಲಿ 37 ಶತಕ ಸಂಪಾದಿಸಿದರು.

ಸಚಿನ್ ತೆಂಡೂಲ್ಕರ್ 27ನೇ ವಯಸ್ಸಿಗೆ 28ನೇ ಜನ್ಮದಿನ ಆಚರಣೆಗೂ ಕೇವಲ 24 ದಿನ ಮುನ್ನ 10 ಸಾವಿರ ರನ್ ಪೂರೈಸಿದರು. 2001, ಮಾರ್ಚ್​ 27ರಂದು ಆಸ್ಟ್ರೇಲಿಯಾ ವಿರುದ್ಧ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಕೊಹ್ಲಿ ಈ ಸಾಧನೆಯನ್ನು 29ನೇ ವರ್ಷದಲ್ಲಿ ಪೂರೈಸಿದರು.

ಆಶ್ಲೆ ಎಸೆತದಲ್ಲಿ ಒಂಟಿ ರನ್ ಕದಿಯುವ ಮೂಲಕ ಕೊಹ್ಲಿ 81 ರನ್ ಗಡಿ ದಾಟಿ, 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಭಾರತದ ಪರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಎಂ.ಎಸ್​. ಧೋನಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಕೊಹ್ಲಿ 42 ರನ್ ಗಳಿಸಿದ್ದಾಗ ವೆಸ್ಟ್ ಇಂಡೀಸ್ ವಿರುದ್ಧ 1573 ರನ್​ಗಳ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

Next Story

RELATED STORIES