Top

ಅಯೋಧ್ಯೆಗೆ ಹೊರಟ ಕಲ್ಲು ತುಂಬಿದ 70 ಟ್ರಕ್​ಗಳು!

ಅಯೋಧ್ಯೆಗೆ ಹೊರಟ ಕಲ್ಲು ತುಂಬಿದ 70 ಟ್ರಕ್​ಗಳು!
X

ಕೇಂದ್ರ ಸರಕಾರ ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಬೇಕು ಎಂದು ಆರ್​ಎಸ್​ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ನೀಡಿದ ಬೆನ್ನಲ್ಲೇ ವಿವಾದಿತ ರಾಮಜನ್ಮಭೂಮಿ ವಿವಾದದ ಪ್ರದೇಶವಾದ ಅಯೋಧ್ಯೆಗೆ ಕಲ್ಲು ತುಂಬಿದ 70ಕ್ಕೂ ಹೆಚ್ಚು ಟ್ರಕ್​ಗಳು ಹೊರಟಿವೆ.

ವಿಶ್ವ ಹಿಂದೂ ಪರಿಷತ್ ಮುಖಂಡರು ಈ ವಿಷಯವನ್ನು ತಿಳಿಸಿದ್ದು, ಅಯೋಧ್ಯೆಗೆ ಬರುತ್ತಿರುವ ಕಲ್ಲು ತುಂಬಿದ 70ಕ್ಕೂ ಹೆಚ್ಚು ಟ್ರಕ್​ಗಳ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಪ್ರಸ್ತುತ ಅಯೋಧ್ಯೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಭದ್ರತಾ ಪಡೆ ಕಾವಲು ನಿಂತಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದ ಕುರಿತು ಅಕ್ಟೋಬರ್ 29ರಿಂದ ವಿಚಾರಣೆ ಆರಂಭವಾಗಲಿದೆ.

ನ್ಯಾಯಾಲಯದ ತೀರ್ಪು ತಮ್ಮ ಪರವಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿರುವ ವಿಶ್ವ ಹಿಂದೂ ಪರಿಷತ್ ಮುಂತಾದ ಸಂಘಟನೆಗಳು ರಾಮ ಮಂದಿರ ವಿನ್ಯಾಸದ ಕೆಲಸದಲ್ಲಿ ನಿರತರಾಗಿದ್ದು, ಒಂದು ವೇಳೆ ತೀರ್ಪು ಬಂದರೆ ಕೂಡಲೇ ಕಾಮಗಾರಿ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

Next Story

RELATED STORIES