Top

ತಿಥಿ ಚಿತ್ರದ ಬರಹಗಾರನ ಮೇಲೆ #Me too ಆರೋಪ..!

ತಿಥಿ ಚಿತ್ರದ ಬರಹಗಾರನ ಮೇಲೆ #Me too ಆರೋಪ..!
X

ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಮತ್ತೊಂದು #Me too ಆರೋಪ ಕೇಳಿಬಂದಿದ್ದು, ತಿಥಿ ಚಿತ್ರದ ಬರಹಗಾರ ಈರೇಗೌಡ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.

ಏಕ್ತಾ ಅನ್ನೋ ಯುವತಿ ಈರೇಗೌಡ ವಿರುದ್ಧ ಆರೋಪ ಮಾಡಿದ್ದು, ಈರೇಗೌಡನ ತಿಥಿ ಚಿತ್ರ ಬರಹದಿಂದ ಪ್ರಭಾವಿತಳಾಗಿದ್ದ ಏಕ್ತಾ, ಸಿನಿಮಾ ಕಲಿಕೆಗೆ ಈರೇಗೌಡನ ಬಳಿ ಬಂದಿದ್ದು, ಏಕ್ತಾಳಿಂದ ಈರೇಗೌಡ ಲೈಂಗಿಕತೆ ನಿರೀಕ್ಷಿಸಿದ್ದ ಎಂದು ಆರೋಪಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಏಕ್ತಾ ಅಳಲು ತೋಡಿಕೊಂಡಿದ್ದು, ಏಕ್ತಾ ಬೆಂಬಲಕ್ಕೆ ಸ್ಯಾಂಡಲ್‌ವುಡ್ ನಟಿ ಶೃತಿ ಹರಿಹರನ್ ನಿಂತಿದ್ದಾರೆ.

ಭಲೇ ಕೆಂಪ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವೇಳೆ ಈ ಘಟನೆ ನಡೆದಿದ್ದು, ಈರೇಗೌಡ ಕಿಸ್ ಮಾಡಲು ಯತ್ನಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಏಕ್ತಾ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ಇನ್ನು ನೊಂದ ಯುವತಿ ಏಕ್ತಾ ಬರಹ ಓದಿ ಫೇಸ್‌ಬುಕ್‌ನಲ್ಲಿ ಜನ ಈರೇಗೌಡಗೆ ತರಾಟೆ ತೆಗೆದುಕೊಂಡಿದ್ದು, ಈ ಆರೋಪದ ಹಿನ್ನೆಲೆ ಧರ್ಮಶಾಲಾ ಚಿತ್ರೋತ್ಸವದಿಂದ, ಈರೇಗೌಡ ನಿರ್ದೇಶನದ ಬಳೆಕೆಂಪ ಸಿನಿಮಾ ಹೊರಗಿಡಲಾಗಿದೆ. ಅಲ್ಲದೇ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳದಂತೆ ಈರೇಗೌಡಗೆ ಸೂಚಿಸಲಾಗಿದೆ.

Next Story

RELATED STORIES