Top

ಫೈರ್ ಸಂಸ್ಥೆಯಿಂದ ಹೊರಬಂದ ನಟಿ ಪ್ರಿಯಾಂಕಾ

ಫೈರ್ ಸಂಸ್ಥೆಯಿಂದ ಹೊರಬಂದ ನಟಿ ಪ್ರಿಯಾಂಕಾ
X

ಫೈರ್ ಸಮಿತಿಯ ಸದಸ್ಯರ ನಡುವಿನ ಹೊಂದಾಣಿಕೆ ಇಲ್ಲದ ಕಾರಣ ಸಂಸ್ಥೆಯಿಂದ ಹೊರ ಬಂದಿದ್ದೇನೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.

ಸಿನಿಮಾ ರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ವಿರುದ್ಧ ದೂರು ಪಡೆದು ಅವರಿಗೆ ಬೆಂಬಲ ನೀಡಲು ಫೈರ್ ಅನ್ನೋ ಆಂತರಿಕ ದೂರು ಸಮಿತಿ ರಚನೆಯಾಗಿದೆ. ಈ ಸಮಿತಿಯ ಕಲ್ಪನೆ ನಟ ಚೇತನ್ ಅವರದ್ದು. ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್, ನಟಿ ಶ್ರುತಿ ಹರಿಹರನ್, ರೂಪ ಅಯ್ಯರ್, ವೀಣಾ ಸುಂದರ್, ಪಂಚಮಿ ಈ ಸಮಿತಿಯ ಸದಸ್ಯರಾಗಿದ್ದರು.

ಕಳೆದ ವರ್ಷ ಈ ಸಮಿತಿ ಕಾರ್ಯರೂಪಕ್ಕೆ ಬಂದಿತ್ತು. ನಟಿ ಪ್ರಿಯಾಂಕ ಉಪೇಂದ್ರ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಕೆಲ ದಿನಗಳ ಹಿಂದೆಯೇ ಅಧ್ಯಕ್ಷ ಸ್ಥಾನದಿಂದ ಹೊರ ಬಂದಿದರು. ಇದೀಗ ಸಂಪೂರ್ಣವಾಗಿ ಸಮಿತಿಯಿಂದ ಹೊರ ಬಂದಿದ್ದೆನೆ ಎಂದು ಪ್ರಿಯಾಂಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರಂಭದಲ್ಲೇ ಅಂದುಕೊಂಡ ರೀತಿಯಲ್ಲಿ ಸಮಿತಿ ಕೆಲಸ ಮಾಡುತ್ತಿರಲಿಲ್ಲ. ಚೇತನ್ ನಿಲುವುಗಳು ತಮಗೆ ಇಷ್ಟವಾಗಲಿಲ್ಲ. ಅವರು ಆಕ್ರಮಣಕಾರಿಯಾಗಿ ಹೋಗುತ್ತಾರೆ. ಅದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಅದೇ ಕಾರಣಕ್ಕೆ ನಾನು 6 ತಿಂಗಳಿನಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.

ಶ್ರುತಿ ಹರಿಹರನ್ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರ ಬೇಸರ ತಂದಿದೆ. ಸುದ್ದಿಗೊಷ್ಠಿ ಮಾಡುವ ವಿಚಾರ ನನಗೆ ಗೊತ್ತೇಯಿರಲಿಲ್ಲ. ನಾನು ಆಗ ಶ್ರೀಲಂಕಾದಲ್ಲಿದ್ದೆ. ಬೇರೆಯವರಿಂದ ವಿಷಯ ತಿಳಿಯಿತು. ನನಗೆ ಬೇರೆಯದ್ದೆ ಐಡಿಯಾ ಇತ್ತು. ಹಿರಿಯ ನಟಿಯರನ್ನ ಸೇರಿಸಿ ಸಮಿತಿ ಕಟ್ಟಬೇಕು ಎಂದು ಅದರೆ ನನ್ನ ನಿಲುವುಗಳಿಗೆ ಬೆಲೆ ಸಿಗಲಿಲ್ಲ. ನಾನು ಫೈರ್ ಸಮಿತಿಗೆ ರಾಜಿನಾಮೆ ನೀಡಿದ್ದೇನೆ. ಈಗ ನನಗೂ ಫೈರ್ ಸಮಿತಿಗೂ ಸಂಬಂಧವಿಲ್ಲ ಎಂದು ಪ್ರಿಯಾಂಕ ಉಪೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.

Next Story

RELATED STORIES