Top

ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರೀತಂ ಗೌಡ ಕಣಕ್ಕೆ..!

ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರೀತಂ ಗೌಡ ಕಣಕ್ಕೆ..!
X

ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಎಂಎಲ್ಎ ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇನ್ನು ಈ ಬಗ್ಗೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಪ್ರೀತಂಗೌಡ,ಕ್ಷೇತ್ರದಲ್ಲಿ ನನ್ನಕಿಂತ ಹಿರಿಯರಾದ ಜಾವಗಲ್ ಶ್ರೀನಾಥ್ ಇದ್ದಾರೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ, ಆದರೆ ಅವರು ಹಾಸನದಿಂದ ಚುನಾವಣೆ ನಿಲ್ಲುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಅಲ್ಲದೇ ಹಾಸನದ ರಾಜಕೀಯವೇ ಬೇರೆ. ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಮೋದಿಯವರಿಗೆ ಬಲ ತುಂಬೋದು ಗ್ಯಾರಂಟಿ. ಜೆಡಿಎಸ್‌ನಿಂದ ಯಾರಾದರೂ ನಿಂತುಕೊಳ್ಳಲಿ,ಅವರ ವಿರುದ್ಧ ಬಿಜೆಪಿಯಿಂದ ಯಾರೇ ನಿಂತರೂ ಅವರಿಗೆ ನಮ್ಮ ಬೆಂಬಲ ಇದ್ದೇ ಇರುತ್ತೆ. ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ರಾಷ್ಟ್ರೀಯ ನಾಯಕರ ನಿರ್ಧಾರ. ಅವರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನನ್ನನ್ನು ಪಕ್ಷದಿಂದ ನಿಲ್ಲಿ ಎಂದು ಹೇಳಿದರೆ ನಾನು ಸ್ಪರ್ಧೆ ಮಾಡೋದು ಗ್ಯಾರಂಟಿ ಎಂದು ಹೇಳಿದ್ದಾರೆ.

Next Story

RELATED STORIES