Top

ಸಿಯೋಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಆಯ್ಕೆ

ಸಿಯೋಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಆಯ್ಕೆ
X

ಭಾರತ ಮತ್ತು ಜಾಗತಿಕ ಆರ್ಥಿಕತೆಗೆ ನೀಡಿದ ಕೊಡುಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ-2018ಗಾಗಿ ಆಯ್ಕೆ ಮಾಡಲಾಗಿದೆ.

ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಲು ಆರ್ಥಿಕತೆಗೆ ಮೋದಿಕಾಮಿಕ್ಸ್ ಎಂಬ ಹೊಸ ವ್ಯಾಖ್ಯಾನ ನೀಡಿದ್ದಕ್ಕಾಗಿ ಮೋದಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ಕ್ವಾನ್ ಇ-ಹ್ಯುಕ್ ನೇತೃತ್ವದ ದಿ ಸಿಯೋಲ್ ಪೀಸ್ ಪ್ರೈಸ್ ಕಲ್ಚರಲ್ ಫೌಂಡೇಷನ್ ಮಂಗಳವಾರ ಈ ಪ್ರಕಟಣೆ ಹೊರಡಿಸಿದ್ದು, ಈ ಪ್ರಶಸ್ತಿಗೆ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದೆ.

1990ರಿಂದ ಜಗತ್ತಿನ ಪ್ರಮುಖ ಗಣ್ಯರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ಮೋದಿ ಈ ಪ್ರಶಸ್ತಿಗೆ ಆಯ್ಕೆಯಾದ 14ನೇ ವ್ಯಕ್ತಿಯಾಗಿದ್ದು, ಭಾರತದ ಮೊದಲಿಗರಾಗಿದ್ದಾರೆ.

Next Story

RELATED STORIES