Top

ರವಿಶ್ರೀವತ್ಸ v/s ಸಂಜನಾ: ತಾರಕಕ್ಕೇರಿದ `ಗಂಡ-ಹೆಂಡತಿ' ಜಗಳ

ರವಿಶ್ರೀವತ್ಸ v/s ಸಂಜನಾ: ತಾರಕಕ್ಕೇರಿದ `ಗಂಡ-ಹೆಂಡತಿ ಜಗಳ
X

ಬಹಿರಂಗವಾಗಿ ಕ್ಷಮೆ ಕೇಳಿ ಎಂದು ನಿರ್ದೇಶಕ ರವಿ ಶ್ರೀವತ್ಸ ಒತ್ತಾಯಿಸಿದರೆ, ನಟಿ ಸಂಜನಾ ನಾನು ಇದಕ್ಕೆಲ್ಲಾ ಬಗ್ಗೊಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ಮೂಲಕ ಗಂಡ-ಹೆಂಡತಿ ಚಿತ್ರದ ಬಗ್ಗೆ ನಟಿ ಸಂಜನಾ ಹಾಗೂ ನಿರ್ದೇಶಕ ಶ್ರೀವತ್ಸ ನಡುವಿನ ಜಗಳ ತಾರಕಕ್ಕೇರಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಶ್ರೀವತ್ಸ, ಆ ಚಿತ್ರದಲ್ಲಿನ ಸಹ ನಿರ್ದೇಶಕರು ಹಾಗೂ ಕಲಾವಿದರ ಸಂಘದ ಪ್ರತಿನಿಧಿಯಾಗಿ ನಾಗೇಂದ್ರ ಪ್ರಸಾದ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಸಂಜನಾ ಆರೋಪ ಮೀಟೂ ಅಭಿಯಾನ ಅಲ್ಲ. ಅದು ಚಿತ್ರದ ಬಗೆಗಿನ ವಿವಾದ. ಚಿತ್ರದಲ್ಲಿ ನಿರ್ದೇಶಕರು ಅನುಚಿತವಾಗಿ ವರ್ತಿಸಿಲ್ಲ ಎಂದು ಹೇಳಿದರು.

ಶ್ರೀವತ್ಸ ಮಾತನಾಡಿ, ಚಿತ್ರ ಬಿಡುಗಡೆ ವೇಳೆ ಗೌರಮ್ಮನಾಗಿ ಮಾಡಿದರೆ ಯಾರು ನೋಡುತ್ತಾರೆ? ಬಟ್ಟೆ ಬಿಚ್ಚಿದರೆ ಅಷ್ಟೇ ನೋಡೋದು. ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಚಿತ್ರ ಬಿಡುಗಡೆಯಾಗಿ 12 ವರ್ಷಗಳ ನಂತರ ಈಗ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಚಿತ್ರದಲ್ಲಿ ನಾವು ಎಲ್ಲೂ ಅನಗತ್ಯವಾಗಿ ಚಿತ್ರೀಕರಣ ಮಾಡಿಲ್ಲ. ಸಂಜನಾ ಪಾತ್ರದ ಆ್ಯಂಗಲ್​ಗೂ ಹಿಂದಿ ಚಿತ್ರದ ಆ್ಯಂಗಲ್​ಗೂ ತುಲನೆ ಮಾಡಿ ನೋಡಲಿ. ಬ್ಯಾಂಕಾಕ್​ನಲ್ಲಿ ಚಿತ್ರೀಕರಣದ ವೇಳೆ ತಾಯಿ ಬಂದಿದ್ದರೂ ಹೊಂದಾಣಿಕೆ ಆಗಲಿಲ್ಲ ಅಂತ ಸ್ವದೇಶಕ್ಕೆ ಮರಳಿದ್ದರೆ ಹೊರತು ನಾವು ಕಳುಹಿಸಲಿಲ್ಲ. ಬ್ಯಾಂಕಾಕ್ ಪೂರ್ತಿ ಶಾಪಿಂಗ್ ಮಾಡಿಕೊಂಡು ಓಡಾಡಿಕೊಂಡಿದ್ದರು ಎಂದರು.

ಸಂಜನಾ ಸುಳ್ಳು ಆರೋಪದಿಂದ ನನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ. ಹೊಸ ಚಿತ್ರಕ್ಕೆ ಅಡ್ಡಿಯುಂಟಾಗಿದೆ. ಸಂಜನಾ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಮುಂದೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಶ್ರೀವತ್ಸ ಎಚ್ಚರಿಸಿದರು.

ನನ್ನ ಬಳಿ ಕೋಟ್ಯಂತರ ರೂ ಆಸ್ತಿ ಇದೆ ಎಂದು ಸಂಜನಾ ಹೇಳುತ್ತಾರೆ. ನಾನು ಇನ್ನೂ ಬಾಡಿಗೆ ಮನೆಯಲ್ಲಿದ್ದೇನೆ. ಆದರೆ ಆಕೆ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾಳೆ. ಅದು ಎಲ್ಲಿಂದ ಬಂತು ಎಂದು ಯಾರಾದರೂ ಕೇಳಿದ್ದೀರಾ? ತೆರಿಗೆ ಕಟ್ಟಿದ್ದಾಳಾ ಎಂದು ಶ್ರೀವತ್ಸ ಪ್ರಶ್ನಿಸಿದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಜನಾ, 50 ಜನರ ಮುಂದೆ ಕಿಸ್ ಮಾಡು ಅನ್ನುತ್ತಿದ್ದರು. ಒಂದು ಹೆಣ್ಣಿಗೆ ಎಷ್ಟು ನೋವಾಗುತ್ತೆ ಗೊತ್ತಾ? ಬ್ಯಾಂಕಾಕ್​ನಲ್ಲಿ ಸತತ ಶೂಟಿಂಗ್​ ಇತ್ತು. ಇನ್ನು ಶಾಪಿಂಗ್ ಎಲ್ಲಿಂದ ಮಾಡಲಿ ಎಂದು ಪ್ರಶ್ನಿಸಿದ್ದಾರೆ.

Next Story

RELATED STORIES