Top

ಪತ್ನಿ ಪುತ್ರಿ ಹಿಂದೆ ಯಾರೋ ಕೈವಾಡ ಇರುವ ಶಂಕೆ: ದುನಿಯಾ ವಿಜಿ

ಪತ್ನಿ ಪುತ್ರಿ ಹಿಂದೆ ಯಾರೋ ಕೈವಾಡ ಇರುವ ಶಂಕೆ: ದುನಿಯಾ ವಿಜಿ
X

ನಾನು ಯಾವುದೇ ರೀತಿ ಹಲ್ಲೆ ಮಾಡಿಲ್ಲ ಮೋನಿಕಾಳನ್ನು ಮನೆ ಒಳಗೆ ಕರೆದುಕೊಂಡಿಯಿಲ್ಲ ಹಲ್ಲೆ ಮಾಡಲೂ ಹೇಗೆ ಸಾಧ್ಯ? ಗಿರಿ ನಗರ ಪೊಲೀಸ್ ರ ವಿಚಾರಣೆ ಮುಕ್ತಾಯದ ಬಳಿಕ ನಟ ದುನಿಯಾ ವಿಜಿ ಪ್ರಶ್ನೆ ಮಾಡಿದರು.

ದುನಿಯಾ ವಿಜಿ, ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಸೆಕ್ಷನ್ 148 ಮತ್ತು 147 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪ ಪಟ್ಟಿಯಲ್ಲಿ ದುನಿಯಾ ವಿಜಿ ಪುತ್ರಿ ದೂರು ನೀಡಿದರ ಹಿನ್ನೆಲೆ ಇಂದು ಗಿರಿನಗರ ಪೊಲೀಸ್ ಠಾಣೆಗೆ ದುನಿಯಾ ವಿಜಿ ಹಾಜರಾಗಿದ್ದರು. ವಿಚಾರಣೆ ಬಳಿಕ ದುನಿಯಾ ವಿಜಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಯಾರಾದರು ಮಗಳ ಮೂಲಕ ಎಫ್ ಐ ಆರ್ ಮಾಡಿಸುತ್ತಿದ್ದರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ದುನಿಯಾ ವಿಜಿ ಯಾರೋ ಮಾಡಿಸುತ್ತಾ ಇದಾರೆ ಅನ್ನಿಸುತ್ತೆ. ಎಫ್ ಐ ಆರ್ ಮೇಲೆ‌ ಎಫ್ ಐ. ಆರ್ ಮಾಡಿಸಲಾಗುತ್ತೀದೆ. ಇದರ ಹಿಂದೆ ಯಾರೀದ್ರೆದರೆ ಅಂತಾ ಇನ್ನೂ ಮೂರುದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ. ಮನೆಯಲ್ಲಿ ಸಿಸಿಟಿವಿ ಇರುವುದು ಸುಳ್ಳು ಡಿವಿಆರ್ ನ ಈಗಾಗಲೇ ಪೊಲೀಸರಿಗೆ ನೀಡಿದ್ದೇವೆ ನಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದರು.

ಮಗಳ ಮೇಲೆ ಹಲ್ಲೆಗೆ ಸಂಬಂಧಪಟ್ಟಂತೆ ವಿವಿಪುರಂ ವಾಹಿಂ ಬಾಷ ವಿಚಾರಣೆಗೆ ಕರೆದಿದರು ವಿಚಾರಣೆ ಮಾಡಿದ್ದಾರೆ. ನಡೆದ ಘಟನೆ ಕುರಿತು ಸಂಪೂರ್ಣ ಮಾಹಿತಿಯನ್ನು ನಾನು ಪೊಲೀಸರ ಮುಂದೆ ಹೇಳಿದ್ದೇನೆ ನ್ಯಾಯ ಸಿಕ್ಕೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

Next Story

RELATED STORIES