Top

ಕುಮಾರಸ್ವಾಮಿಯದ್ದು ಎಲುಬಿಲ್ಲದ ನಾಲಿಗೆ: ಯಡಿಯೂರಪ್ಪ

ಕುಮಾರಸ್ವಾಮಿಯದ್ದು ಎಲುಬಿಲ್ಲದ ನಾಲಿಗೆ: ಯಡಿಯೂರಪ್ಪ
X

ಕಳೆದ ತಿಂಗಳಿಂದ ಬೊಬ್ಬೆ ಹೊಡೆದರು ಸಾಲಮನ್ನಾ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಓಟ್ ಬೇಕು, ಕೆಲಸ ಬೇಡ. ಎಲುಬಿಲ್ಲದ ನಾಲಿಗೆ ಏನು ಬೇಕಾದರು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಮತಕ್ಷೇತ್ರವಾದ ಹುನ್ನೂರ ಗ್ರಾಮದಲ್ಲಿ ಮಾತನಾಡಿದ ಯಡಿಯೂರಪ್ಪ ಜನರು ನಮ್ಮ ಶಾಸಕರನ್ನು ಗೆಲ್ಲಿಸಿಲ್ಲ ನಾ ಹೇಗೆ ಕೆಲಸ ಮಾಡಲಿ ಎಂದು ಸೊಕ್ಕಿನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದ್ದಾರು ಹೀಗ ಮತ ಹೇಗೆ ಕೇಳ್ತಾರೇ ಮತ ಕೇಳೋ ಹಕ್ಕು ಕುಮಾರಸ್ವಾಮಿಯವರಿಗಿಲ್ಲ ಎಂದರು.

ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಮಾಡಿದ ಯಡಿಯೂರಪ್ಪ ಕಾಂಗ್ರೆಸ್ -ಜೆಡಿಎಸ್ ಚುನಾವಣೆಯಲ್ಲಿ ಹಣ-ಹೆಂಡ ಹಂಚಿ ಗೆಲ್ತೀವಿ ಅನ್ನೂ ಭ್ರಮೆಯಲ್ಲಿದ್ದಾರೆ. ಕುಮಾರಸ್ವಾಮಿ ಸರ್ಕಾರಕ್ಕೆ ಪಾಠ ಕಲಿಸೋ ಚುನಾವಣೆಯಿದು ಎಂದು ಮಾತನಾಡಿದರು.

ಬಾಷಣದ ಸಂಧರ್ಭದಲ್ಲಿ ಸಿದ್ದರಾಮಯ್ಯ ರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದ್ದು. ಈ ಅಪ್ಪ-ಮಕ್ಕಳು ನಿಮಗೆ ಏನು ದ್ರೋಹ ಮಾಡಿದ್ದಾರೆ ಗೊತ್ತು ತಾನೆ ಸಿದ್ದರಾಮಯ್ಯನವರೆ. ಕುರುಬ ಸಮುದಾಯದವರಿಗೆ ಹೇಳ್ತಿದ್ದೀನಿ ಮೋಸ ಹೋಗಬೇಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರನ್ನು ಸೋಲಿಸಲು ಜಿ ಟಿ ದೇವೇಗೌಡರನ್ನು ನಿಲ್ಲಿಸಿದ್ದಾರು.

ಸಿದ್ದರಾಮಯ್ಯರ ವಿರುದ್ಧವಾಗಿ ಜಿ.ಟಿ‌.ದೇವೆಗೌಡ ರನ್ನ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಕುರುಬ ಸಮುದಾಯದವರು ಇದನ್ನೇಲ್ಲ ಯೋಚಿಸಿಸಬೇಕು ಎಂದು ಬಿಎಸ್​ವೈ ಮಾತನಾಡಿದರು,

ಬಾದಾಮಿ ಬದಲಿಗೆ ಬಾಯಿತಪ್ಪಿ ಜಮಖಂಡಿಯಲ್ಲಿ ಗೆಲ್ಲದಿದ್ದಾರೆ ಎಂದ ಬಿಎಸ್​ವೈ ತಕ್ಷಣ ಎಚ್ಚರಿತುಕೊಂಡು ತಪ್ಪನ್ನು ಸರಿಪಡಿಸಿಕೊಂಡು ಬಾದಾಮಿಯಲ್ಲಿ ಸಿದ್ದರಾಮಯ್ಯ ಕಡಿಮೆ ಅಂತರದಲ್ಲಿ ಗೆದರು.‌ ಕುರುಬ ಸಮುದಾಯದ ಬಾಂಧವರು ಇದನ್ನು ತಿಳಿದುಕೊಳ್ಳಬೇಕು. ಈಗ ಜನರಿಗೆ ದ್ರೋಹ ಮಾಡುತ್ತಾ ಹೋಗುತ್ತಿದ್ದಾರೆ ಕುಮಾರಸ್ವಾಮಿ ಮತ್ತು ತಂಡ ಎಂದರು.

ನಮ್ಮ ನಾಯಕ ಮೋದಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಲೋಕಸಭೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮೋದಿಯವರು ಮತ್ತೆ ಪ್ರಧಾನಿ ಮಂತ್ರಿ ಆಗುತ್ತಾರೆ ಎಂದರು.

Next Story

RELATED STORIES