Top

ಅನಂತ್ ಕುಮಾರ್‌ ಹೆಗಡೆ ಉಪಚುನಾವಣೆಯಿಂದ ದೂರ..!?

ಅನಂತ್ ಕುಮಾರ್‌ ಹೆಗಡೆ ಉಪಚುನಾವಣೆಯಿಂದ ದೂರ..!?
X

ಬೆಂಗಳೂರು: ಬಿಜೆಪಿ ಫೈಯರ್ ಬ್ರ್ಯಾಂಡ್ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯನ್ನು ಬಿಜೆಪಿ ಉಪಚುನಾವಣೆಯಿಂದ ದೂರವಿಟ್ಟಿದೆಯಾ ಎಂಬ ಪ್ರಶ್ನೆ ಮೂಡಿದೆ.

ಉಪಚುನಾವಣೆ ಘೋಷಣೆ ಬಳಿಕ ಅನಂತ್ ಕುಮಾರ್ ಹೆಗಡೆ ಯಾವ ಪ್ರಚಾರ ಸಭೆ, ಸಮಾರಂಭಗಳಲ್ಲಿಯೂ ಕಾಣಿಸಿಕೊಂಡಿಲ್ಲ.

ಇನ್ನು ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕೊಟ್ಟರೆ, ಈ ಬಾರಿಯ ಉಪಚುನಾವಣೆಗೆ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣ, ಹೆಗಡೆಯವರನ್ನ ಉಪಚುನಾವಣೆಯಿಂದ ದೂರವಿಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೂ ಹೆಗಡೆ ಹೇಳಿಕೆಯಿಂದ ಮುಜುಗರ ಉಂಟಾಗಬಹುದೆಂಬ ಆತಂಕ ಉಂಟಾಗಿದೆ.

ಅನಂತ್ ಕುಮಾರ್ ಹೆಗಡೆ ಭಾಷಣದ ವೇಳೆ ಪ್ರಖರ ಭಾಷೆ, ವಿರೋಧಿಗಳ ವಿರುದ್ಧ ತೀಕ್ಷ್ಣ ಪದಬಳಕೆ ಮಾಡುವ ಸಾಧ್ಯತೆ ಇದ್ದು, ಹೀಗಾಗಿ ರಾಜ್ಯ ಬಿಜೆಪಿ ಹೆಗಡೆ ಸಹವಾಸ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ ಎಂಬ ಮಾತು ಕೇಳಿ ಬಂದಿದೆ.

ಇನ್ನು ಹಿಂದುತ್ವದ ಬಗ್ಗೆ ಪ್ರಖರ ಮಾತುಗಳನ್ನಾಡಿ, ಹೋದಲ್ಲೆಲ್ಲಾ ಚಪ್ಪಾಳೆ ಸಿಳ್ಳೆ ಗಿಟ್ಟಿಸಿಕೊಳ್ಳುವ ಅನಂತ್ ಕುಮಾರ್ ಹೆಗಡೆ ಮುಂದೆ, ತಮ್ಮ ವರ್ಚಸ್ಸೆಲ್ಲಿ ಕಡಿಮೆಯಾಗಿಬಿಡುತ್ತೋ ಅನ್ನೋ ಆತಂಕದಿಂದ ಬಿ.ಎಸ್.ಯಡಿಯೂರಪ್ಪ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಉಪಚುನಾವಣೆಯಿಂದ ದೂರವಿಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ರಾಜ್ಯ ಬಿಜೆಪಿ ವಲಯದಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.

Next Story

RELATED STORIES