ಶಿಕ್ಷಕರು ಬುದ್ದಿ ಹೇಳಿದ್ದಕ್ಕೆ: ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನ

ಅದೊಂದು ಪ್ರತಿಷ್ಠಿತ ವಿದ್ಯಾಸಂಸ್ಥೆ ಅಲ್ಲಿ ಎಂದಿನಂತೆ ಶಾಲೆ ಮತ್ತು ಕಾಲೇಜು ದಿನದ ಪಾಠ ಮುಗಿಸಿ ವಿಧ್ಯಾರ್ಥಿಗಳು ಮನೆ ಕೆಡ ಹೊರಟಿದ್ದಾರು ಅಷ್ಟರಲ್ಲಿ ಕಾಲೇಜ್ ಆವರಣದಲ್ಲಿ ಸ್ಟೂಡೆಂಟ್ ಇಬ್ಬರೂ ಸೆಕೆಂಡ್ ಪ್ಲೊರ್ ನಿಂದ ಜಿಗಿದ್ದು ಆತ್ಮಹತ್ಯೆ ಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರದ ಜಾಲಹಳ್ಳಿಯಲ್ಲಿರುವ ಸೆಂಟ್ ಕ್ಲಾರೆಟ್ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.
ಮತ್ತಿಕೆರೆಯ ಹರೀಶ್ ಮತ್ತು ಶೋಯೆಬ್ ಕುಡಿದು ಸೆಂಟ್ ಕ್ಲಾರೆಟ್ ಕ್ಲಾಸ್ ಗೆ ಆಗಮಿಸಿದ್ದಾರೆ.ಇದರಿಂದ ಕೋಪಗೊಂಡ ಶಿಕ್ಷಕರು ಕುಡಿದಿದ್ದ ವಿದ್ಯಾರ್ಥಿಗಳಿಗೆ ಎಲ್ಲರೆದುರು ಬೈದಿದ್ದಾರೆ. ಮೊದಲೆ ನಷೆಯಲಿದ್ದ ಹುಡುಗರು ಇದರಿಂದ ಮನನೊಂದು ಕಾಲೇಜಿನ ಕಟ್ಟಡ ಮೇಲಿಂದ ಜಿಗಿದ್ದು ಗಾಯಗೊಂಡಿದ್ದಾರೆ.
ಇನ್ನು ಗಾಯಗೊಂಡ ವಿದ್ಯಾರ್ಥಿಗಳನ್ನ ಕೂಡಲೇ ಸಮೀಪದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇಬ್ಬರೂ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾಲೇಜಿನಲ್ಲಿ ಈ ರೀತಿ ಘಟನೆ ನಡೆದಿರುವುದಕ್ಕೆ ಅಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿ ಮುಂದೇ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಜಾಲಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.