Top

ಕೋಮುವಾದವನ್ನು ತೊಡೆದುಹಾಕಲು ಒಂದಾಗಿದ್ದೇವೆ: ಪ್ರಜ್ವಲ್ ರೇವಣ್ಣ

ಕೋಮುವಾದವನ್ನು ತೊಡೆದುಹಾಕಲು ಒಂದಾಗಿದ್ದೇವೆ: ಪ್ರಜ್ವಲ್ ರೇವಣ್ಣ
X

ಬಿಜೆಪಿ ಬಿಟ್ಟು ಮಾಜಿ ಸಿಎಂ ಯಡಿಯೂರಪ್ಪ ಹೊರ ಹೋಗಿರಲಿಲ್ಲವೇ? ಬಿಜೆಪಿಯನ್ನು ಮುಗಿಸಿಯೇ ಬಿಡುತ್ತೇನೆ ಎಂದು ಹೇಳಿರಲಿಲ್ಲವೇ? ಅವರು ಮಾತ್ರ ಏನು ಬೇಕಾದರೋ ಮಾಡಬಹುದು ಜಾತ್ಯತೀತ ಪಕ್ಷಗಳು ಏಕೆ ಒಂದಾಗಬಾರದು ಎಂದು ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.

ಇದೇ ತಿಂಗಳ 28ರಂದು ನಡೆಯಲಿರುವ ಕೊಡಗಿನ 3 ಪಟ್ಟಣ ಪಂಚಾಯ್ತಿಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಜ್ವಲ್ ರೇವಣ್ಣ ಪ್ರಚಾರ ನಡೆಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕೋಮುವಾದ ತೊಡೆದು ಹಾಕಲು ಜಾತ್ಯಾತೀತ ಮನಸ್ಥಿತಿಯ ಜೆಡಿಎಸ್ ಹಾಗೂ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ.

ದೇವೇಗೌಡರು ಹಾಗೂ ಸಿದ್ದರಾಮಯ್ಯ 12 ವರ್ಷಗಳ ನಂತರ ಒಂದಾಗಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರೀಯಿಸಿದ ಪ್ರಜ್ವಲ್, ಬಿಜೆಪಿಯನ್ನು ಮುಗಿಸ್ತೇನೆ ಅಂತಿದ್ದ ಯಡಿಯೂರಪ್ಪ ಶ್ರೀರಾಮಲೇ ಈಗ ಒಂದಾಗಿಲ್ವಾ ಎಂದು ಪ್ರಶ್ನಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಹಾಗೂ ಕಾರ್ಯಕರ್ತರು ಎಲ್ಲಿ ಹೇಳ್ತಾರೆ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಮಾತನಾಡಿದರು.

Next Story

RELATED STORIES