Top

ಕಾಂಗ್ರೆಸ್ ನಾಯಕನಿಲ್ಲದ ಪಕ್ಷ: ಬಿಎಸ್​ವೈ

ಕಾಂಗ್ರೆಸ್ ನಾಯಕನಿಲ್ಲದ ಪಕ್ಷ: ಬಿಎಸ್​ವೈ
X

ಕಾಂಗ್ರೆಸ್ ನಾಯಕನಿಲ್ಲದ ಪಕ್ಷವಾಗಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಕೇವಲ ಒಂದೂವರೆ ಸಾವಿರ ಮತಗಳಿಂದ. ಅವರನ್ನು ಅಪಮಾನ ಮಾಡುವ ಉದ್ದೇಶದಿಂದ ಶಿವರಾಮೇಗೌಡ ಅವರಿಗೆ ಹೋಲಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನಡೆದ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಯಡಿಯೂರಪ್ಪ, ಕುಮಾರಸ್ವಾಮಿ ಕೈಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಆಗ್ತಿಲ್ಲ. ಸಾಲ ಮನ್ನಾ ಮಾಡದೇ ಮೋದಿ ಕಡೆಗೆ ಬೆಟ್ಟು ಮಾಡಿ ತೋರಿಸ್ತಿದ್ದಾರೆ ಎಂದು ಆರೋಪಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜೆಡಿಎಸ್, ಇದೀಗ ಅವರನ್ನು ಅಪ್ಪಿಕೊಳ್ಳಲು ಮುಂದಾಗಿದೆ. ಇದು ನಿಜವಾದ ಪ್ರೀತಿ ಅಲ್ಲ. ಕೇವಲ ಸ್ಟಂಟ್ ಎಂದು ಯಡಿಯೂರಪ್ಪ ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮೈತ್ರಿ ಸರ್ಕಾರ ಬಂದಿರುವುದರಿಂದ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿಗೆ ನೆಮ್ಮದಿ ಇಲ್ಲದಂತಾಗಿದೆ. ದೇವೇಗೌಡ, ಸಿದ್ದರಾಮಯ್ಯ 12 ವರ್ಷದ ನಂತರ ಒಂದಾಗಿದ್ದಾರೆ ಎಂದರು.

ದೃತರಾಷ್ಟ್ರನಂತೆ ಇಬ್ಬರು ಒಂದಾಗಿದ್ದಾರೆ. ಹಾವು- ಮುಂಗುಸಿಯಂತಿರುವ ದೇವೇಗೌಡ, ಸಿದ್ದರಾಮಯ್ಯ ಹೊಂದಾಗಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ದೇವೇಗೌಡ, ಕುಮಾರಸ್ವಾಮಿ ಕಪಿಮುಷ್ಟಿಯಲ್ಲಿದೆ ಎಂದು ಅಶೋಕ್​ ಆರೋಪಿಸಿದರು.

ಸರಕಾರ ಬಂದು 6 ತಿಂಗಳಾದರೂ ಸರ್ಕಾರ‌ ಟೇಕಾಫ್ ಆಗಿಲ್ಲ. ದೃತರಾಷ್ಟ್ರನ ಆಲಿಂಗ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ವಿರುದ್ದ ದೇವೇಗೌಡ ಪಾದಯಾತ್ರೆ ಮಾಡಿದರು. ಇದೀಗ ಅಂತಹ ಶಿವರಾಮೇಗೌಡ ಗೆ ಜೆಡಿಎಸ್ ಮಣೆ ಹಾಕಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.

Next Story

RELATED STORIES