Top

ಪ್ರಕಾಶ್ ರೈ, ಶ್ರುತಿಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಪ್ರಕಾಶ್ ರೈ, ಶ್ರುತಿಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?
X

ಹಿರಿಯ ನಟ ಅರ್ಜುನ್ ಸರ್ಜಾ ಅವರ 35 ವರ್ಷದ ಸಿನಿಮಾ ಕೃಷಿಯನ್ನು ನಟಿ ಶ್ರುತಿ ಹರಿಹರನ್ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ. ಇದು ಅರ್ಜುನ್ ರನ್ನು ಕೊಲೆ ಮಾಡಿದ ಹಾಗೆ ಎಂದು ಶ್ರೀರಂಗಪಟ್ಟಣದಲ್ಲಿ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದರು.

ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ, ಏಕವಚನ ಮಾತನಾಡುವ ವ್ಯಕ್ತಿ ಅಲ್ಲ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಬಿಟ್ಟರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್ ಮನ್, ಅರ್ಜುನ್ ಸರ್ಜಾ ವಿಚಾರದಲ್ಲಿ ಶ್ರುತಿ ಹರಿಹರನ್ ತಪ್ಪು ಮಾಡಿದ್ದಾರೆ ಇದು ಆಂದೋಲನ ಮಟ್ಟಕ್ಕೆ ಹೋಗಿದೆ ಈ ಪ್ರಕರಣದಲ್ಲಿ ಏನೋ ಇದೆ ಎಂದರು.

ಹೆಣ್ಣು ಮಕ್ಕಳು ಸಿನಿಮಾಗೆ ಬಂದರೆ ಸಾರ್ವಜನಿಕ ವಾಗಿ ನಟನೆ ಮಾಡಬೇಕು ಸಿನಿಮಾ ಅನ್ನೋದು ಗಂಧರ್ವ ವಿದ್ಯೆ ತರ ಬಹುಭಾಷ ನಟ ಪ್ರಕಾಶ್ ರೈ ಒಬ್ಬ ಜಂಟಲ್ ಮನ್ ದೇಶದ ಮಹಾನ್ ನಾಯಕ, ಜನ ನೊಂದರೆ ಅವರ ಸಮಸ್ಯೆಗೆ ಬರ್ತಾರೆ ಅರ್ಜುನ್ ಸರ್ಜಾ ಸ್ಲಂ ನಿಂದ ಬಂದಿರೋರು ಪ್ರಕಾಶ್ ರೈ ದೇವಲೋಕದಿಂದ ಬಂದಿರೋರು ಸಿಕ್ಕಿದ್ದು ಚಾನ್ಸ್ ಅಂತ ಬಾಯಿಗೆ ಬಂದಂಗೆ ಮಾತಾಡೋದು ತಪ್ಪು ಎಂದು ಮಾತಿನ ಮಧ್ಯೆ ಪ್ರಕಾಶ್ ರೈ ಕಾಲೆಳೆದರು ಜಗ್ಗೇಶ್

ದುಡ್ಡಿರೋರೆಲ್ಲಾ ಹೀರೋಗಳಾದರೆ ಚಿತ್ರರಂಗದ ಘನತೆ ಹಾಳಾಗುತ್ತೆ ಚಿತ್ರರಂಗ ಗಂಧರ್ವ ವಿದ್ಯೆ, ಕಳ್ಳ, ವೇಶ್ಯೆ ಹೀಗೆ ನಾನಾ ಪಾತ್ರ ಮಾಡಬೇಕು. ಪರಕಾಯ ಪ್ರವೇಶ ಮಾಡಬೇಕು ನಾನೆಂದು ಸ್ತ್ರೀ ಪರ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ಹಿಂಸೆ ಕೊಟರೆ ಮೊಬೈಲ್ ನಲ್ಲಿ ಆನ್ ಲೈನ್ ಲೈವ್ ಮಾಡಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನ ಟ್ಯಾಗ್ ಮಾಡಿ ಚಲನಚಿತ್ರ ವಾಣಿಜ್ಯ ಮಂಡಳಿಗಾದರು ದೂರು ಕೊಡಿ ಘಟನೆ ನಡೆದಾಗ ಪ್ರತಿಕ್ರಿಯೆ ಮಾಡದೇ ಈಗ ಮಾಡೋದು ಸರೀನಾ? ಶ್ರುತಿ ಈ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಜಗ್ಗೇಶ್ ಹೇಳಿದರು.

Next Story

RELATED STORIES