Top

ಬಿಬಿಎಂಪಿ ಮುಚ್ಚಿಸುವುದಾಗಿ ಹೈಕೋರ್ಟ್​ ಎಚ್ಚರಿಕೆ

ಬಿಬಿಎಂಪಿ ಮುಚ್ಚಿಸುವುದಾಗಿ ಹೈಕೋರ್ಟ್​ ಎಚ್ಚರಿಕೆ
X

ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಕಾಳಜಿಯಿಲ್ಲ. ಬಿಬಿಎಂಪಿ ಕೆಲಸ ಮಾಡದಿದ್ದರೆ ಬೆಂಗಳೂರು ಸ್ಥಗಿತವಾಗುವುದಿಲ್ಲ. ಬದಲಿಗೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದೆಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ದೇಶನ ಕೋರಿ ಕೋರಮಂಗಲದ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಸಿಜೆ ದಿನೇಶ್​ ಕುಮಾರ್​ ನೇತೃತ್ವದ ವಿಭಾಗೀಯ ಪೀಠ, ಒಂದೊಂದು ಗುಂಡಿಯನ್ನೂ ಮುಚ್ಚಿದ್ದೀರಾ ಎಂದು ಕೋರ್ಟ್​ ಕೇಳಬೇಕ, ನಿಮ್ಮ ಅಧಿಕಾರಿಗಳಿಗೆ ಗಂಭೀರತೆ ಇಲ್ಲ. ಬರಿ ಕಾಲಹರಣ ಮಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕೆಲಸ ಮಾಡದಿದ್ದಾರೆ ಬೆಂಗಳೂರು ಸ್ಥಗಿತವಾಗುವುದಿಲ್ಲ, ಬಿಬಿಎಂಪಿ ಸ್ಥಗಿತವಾಗುತ್ತೆ. ನೀವು ದೊಡ್ಡ ಬೆಲೆ ತರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಅರ್ಜಿದಾರರ ಪರ ವಕೀಲೆ ಎಸ್. ಆರ್.ಅನುರಾಧ ವಾದ ಮಂಡಿಸಿ, ಹಿಂದೆ ಕೋರ್ಟ್ ಗಮನಕ್ಕೆ ತರಲಾಗಿದ್ದ 43 ಗುಂಡಿಗಳ ಮುಚ್ಚಿಲ್ಲ ಎಂದು ಕೋರ್ಟ್​ ಗಮನ ತಂದರು. ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್​ ಸಿಜೆ ದಿನೇಶ್​ ಮಹೇಶ್ವರಿ, ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಸಾರ್ವಜನಿಕ ಕೆಲಸಗಳನ್ನು ಮಾಡಿ ಮುಗಿಸುವ ಸ್ಪಷ್ಟತೆ, ನಿಖರತೆ ಅವರಿಗೆ ಇಲ್ಲವೆಂದು ತರಾಟೆ ತೆಗೆದುಕೊಂಡರು.

ಗುಂಡಿ ಮುಚ್ಚದಿದ್ದರೆ ನಿಮ್ಮದು ವೈಫಲ್ಯ ಎಂದು ಪರಿಗಣಿಸಲಾಗುವುದು. ಈ ಕಾರ್ಯ ಮಾಡಲು ಮತ್ತೊಂದು ಏಜೆನ್ಸಿ ಗೆ ವಹಿಸುವತ್ತೇವೆ. ಆ ಮೂಲಕ ಬಿಬಿಎಂಪಿ ನಿಷ್ಪ್ರಯೋಜಕವೆಂದು ನೀವು ಸಾಬೀತು ಮಾಡುತಿದ್ದೀರಾ .ನಿಮ್ಮ ಅಧಿಕಾರಿಗಳಿಗೇ ನಿಮ್ಮ ಕೆಲಸದ ಸುಳಿವಿಲ್ಲ.43 ಪ್ರದೇಶಗಳ ರಸ್ತೆಗುಂಡಿಗಳನ್ನು ಇವತ್ತೇ ಮುಚ್ಚಬೇಕು ಎಂದು ತಾಕಿತು ಮಾಡಿದರು.

ಮಧ್ಯನ ವಿಚಾರಣೆ ನಡೆಸಿದ ವೇಳೆ ಬಿಬಿಎಂಪಿ ಪರ ವಕೀಲರು, 14 ಸ್ಥಳಗಳ ರಸ್ತೆ ಗುಂಡಿ ಮುಚ್ಚಲಾಗಿದೆ. ಉಳಿದೆಡೆ ಬಿಡಬ್ಲುಎಸ್ಎಸ್ ಬಿ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನು ದಾಖಲಿಸಿಕೊಂಡ ಹೈಕೋರ್ಟ್​, ಬಿಬಿಎಂಪಿ ಕಾಮಗಾರಿ ಪರಿಶೀಲನೆ ನಡೆಸಿ. ರಾತ್ರಿ ವೇಳೆಯೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಆ ಕಾಮಗಾರಿಯನ್ನೂ ಪರಿಶೀಲಿಸಲು ಕಮಿಷನ್ ಮಿಲಿಟರಿ ಎಂಜಿನಿಯರಿಂಗ್ ಸೂಪರಿಂಟೆಂಡೆಂಟ್ ದಿನೇಶ್ ಅಗರ್ವಾಲ್,ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಅವರಿಗೆ ಹೈಕೋರ್ಟ್​ ಸಿಜೆ ದಿನೇಶ್​ ಕುಮಾರ್ ಸೂಚಿಸಿದರು.

ವಿಚಾರಣೆಯನ್ನು ಅಕ್ಟೋಬರ್​ 25 ಕ್ಕೆ ಮುಂದೂಡಿದ ಸಿಜೆ ದಿನೇಶ್​ ಕುಮಾರ್ ಇನ್ನು ಮುಂದೆ ಪ್ರಕರಣದ ವಿಚಾರಣೆ ಶನಿವಾರದಂದು ನಡೆಸಲು ನಿರ್ಧಾರ ಮಾಡಿದರು. ಗುಂಡಿ ಮುಚ್ಚಲು 15 ದಿನಗಳ ಕಾಲಾವಕಾಶ ಹೈಕೋರ್ಟ್​ ಬಿಬಿಎಂಪಿಗೆ ನೀಡಿದೆ.

Next Story

RELATED STORIES