Top

ಮಗಳ ಮೇಲೆ ಹಲ್ಲೆ ಮಾಡಿದರಾ ದುನಿಯಾ ವಿಜಿ, ಕೀರ್ತಿಗೌಡ?

ಮಗಳ ಮೇಲೆ ಹಲ್ಲೆ ಮಾಡಿದರಾ ದುನಿಯಾ ವಿಜಿ, ಕೀರ್ತಿಗೌಡ?
X

ನಟ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿ ಗೌಡ ವಿರುದ್ಧ ಪುತ್ರಿ ಮೋನಿಕಾ ಪೊಲೀಸರಿಗೆ ದೂರು ನೀಡಿದ್ದು, ದುನಿಯಾ ವಿಜಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದುನಿಯಾ ವಿಜಿ, ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಮೊದಲ ಪತ್ನಿ ನಾಗರತ್ನ ಪುತ್ರಿ ಮೋನಿಕಾ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಬಟ್ಟೆಗಳನ್ನು ತರಲು ಕೀರ್ತಿ ಗೌಡ ಮತ್ತು ವಿಜಿ ಇದ್ದ ಮನೆಗೆ ಹೋಗಿದ್ದಾಗ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೇ ಮೇಲೆ ಹಲ್ಲೆ ಮಾಡಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪುತ್ರಿ ಮೋನಿಕಾ ದೂರಿನಲ್ಲಿ ಆರೋಪಿಸಿದ್ದಾರೆ.

ದುನಿಯಾ ವಿಜಿ, ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಸೆಕ್ಷನ್ 148 ಮತ್ತು 147 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪ ಪಟ್ಟಿಯಲ್ಲಿ ದುನಿಯಾ ವಿಜಿ ಹಾಗೂ ಕೀರ್ತಿ ಗೌಡ ಆರೋಪಿ ನಂ.1 ಮತ್ತು 2 ಎಂದು ಉಲ್ಲೇಖಿಸಲಾಗಿದೆ.

ಇತ್ತೀಚೆಗಷ್ಟೇ ಪಾನಿಪೂರಿ ಕಿಟ್ಟಿ ಸೋದರನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ದಿನ ಕಳೆದಿದ್ದ ದುನಿಯಾ ವಿಜಿ ಹಾಗೂ ಸಹಚರರು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದರು. ಈ ವೇಳೆ ಕೀರ್ತಿ ಗೌಡ ತನ್ನ ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಹಲ್ಲೆ ಮಾಡಿದ್ದಾರೆ ಎಂದು ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದರು.

Next Story

RELATED STORIES