ದೇವಲಾಯದಲ್ಲೇ ಗುಂಡಿ ತೋಡಿದ ಕಿಡಿಗೇಡಿಗಳು

X
TV5 Kannada23 Oct 2018 3:24 PM GMT
ನಿಧಿ ಆಸೆಗಾಗಿ ದೇಗುಲಕ್ಕೆ ಕನ್ನ ಹಾಕಿ ಗರ್ಭಗುಡಿಯಲ್ಲೇ ಗುಂಡಿ ತೋಡಿರುವಂತ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ಹಳೇ ನಿಜಗಲ್ ಗ್ರಾಮದ ಬಳಿ ಇರುವ ಪುರಾತನ ದೇವಾಲಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ದೇಗುಲದ ಗರ್ಭಗುಡಿಯಲ್ಲಿ ದೇವರ ಪ್ರತಿಮೆಯನ್ನ ಬದಿಗಿಟ್ಟು ಸುಮಾರು 6 ಅಡಿ ಗುಂಡಿ ತೆಗೆದು ಶೋಧ ಮಾಡಿದ್ದಾರೆ. ಇನ್ನೂ ದೇವಸ್ಥಾನದ ಸುತ್ತಲೂ ಬೂದಗುಂಬಳ ಕಾಯಿ, ನಿಂಬೆಹಣ್ಣು ದಾರ ಸುತ್ತಿ ವಾಮಾಚಾರವನ್ನು ಮಾಡಿರುವ ಕಿಡಿಗೇಡಿಗಳಿಗೆ ಯಾವುದೇ ನಿಧಿ ಸಿಕ್ಕಿಲ್ಲ ಎಂದು ಸ್ಥಳೀಯ ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ನಿಧಿ ಸಿಗುತ್ತಾದೆಂಬ ಆಸೆಯಿಂದ ಮಾಟಮಂತ್ರ, ವಾಮಾಚಾರ ಎಸಗಿ ದೇವರಿಗೆ ದಿಗ್ಬಂಧನ ಮಾಡಿದ್ದಾರೆ. ಶಿಲ್ಪ ಕಲಾ ವೈಭವದಿಂದ ಕಂಗೊಳಿಸುವ ಇಂತಹ ದೇವಾಲಯಗಳು ನಿಧಿಗಳ್ಳರ ಕೃತ್ಯದಿಂದ ವಿರೂಪಗೊಳ್ಳುತ್ತಿವೆ.
ಇನ್ನೂ ದಾಬಸ್ ಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದಾರೆ.
Next Story