80ರ ವೃದ್ಧನನ್ನು ಮದುವೆಯಾದ ವಿಧವೆಗೆ ಚಪ್ಪಲಿ ಏಟು..!

ಮಂಡ್ಯ: 35ರ ವಿಧವೆಯನ್ನ 80ರ ವೃದ್ಧ ವಿವಾಹವಾಗಿದ್ದು,ಇದ್ರಿಂದ ಸಿಟ್ಟಿಗೆದ್ದ ಮೊದಲನೇ ಪತ್ನಿ ಹಾಗೂ ಮಕ್ಕಳು ನಡುರಸ್ತೆಯಲ್ಲೇ ವಿಧವೆಗೆ ಚಪ್ಪಲಿಯಲ್ಲಿ ಹೊಡೆದು ಪ್ರಾಣ ಬೆದರಿಕೆ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಾಗಮಂಗಲ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎನ್,ಎಂ ಮಹಮದ್ ಗೌಸ್ ಎಂಬ ವೃದ್ಧನೇ 35ವರ್ಷದ ವಿಧವೆ ಕೈಹಿಡಿದ ವ್ಯಕ್ತಿಯಾಗಿದ್ದು, ತನ್ನ ಮೊದಲ ಪತ್ನಿ ಮತ್ತು ಮಕ್ಕಳು ತನ್ನನ್ನು ನಿರ್ಲಕ್ಷಿಸಿದ್ರು ಎಂಬ ಕಾರಣಕ್ಕೆ 80ರ ಇಳಿ ವಯಸ್ಸಿನಲ್ಲೂ ವಿಧವೆಯನ್ನು ಎರಡನೇ ಮದ್ವೆಯಾಗಿದ್ದಾನೆ.
ಮಹಮ್ಮದ್ ಗೌಸ್ ಹಾಗೂ ಮೊದಲ ಪತ್ನಿ ಅಮಿನಾ ಖಾತೂನ್ ಮಧ್ಯೆ ಹಲವು ವರ್ಷಗಳಿಂದ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದ್ದು,ಗೌಸ್ ಅವರಿಗೆ ಪತ್ನಿ ಹಾಗೂ ಮಕ್ಕಳು ಊಟವನ್ನೂ ಕೊಡದೇ ಚಿತ್ರಹಿಂಸೆ ನೀಡ್ತಿದ್ರು.
ಈ ಸಂದರ್ಭದಲ್ಲಿ ಗೌಸ್ ಮನೆಯಲ್ಲಿ ಬಾಡಿಗೆಗಿದ್ದ ನೂರ್ ಅಬ್ಜಾ ಎಂಬ ವಿಧವೆ ಗೌಸ್ ಗೆ ಆಗಾಗ್ಗೆ ಊಟಕೊಟ್ಟು ಆರೈಕೆ ಮಾಡ್ತಿದ್ರು.
ಗೌಸ್ ಹಾಗೂ ನೂರ್ ಅಬ್ಜಾ ಒಡನಾಟವನ್ನು ತಪ್ಪಾಗಿ ತಿಳಿದ ಮೊದಲನೇ ಪತ್ನಿ ಅಮಿನಾ ಖಾತೂನ್ ನಿಮ್ಮಿಬ್ಬರ ಮಧ್ಯೆ ಅನೈತಿಕ ಸಂಭಂಧವಿದೆ ಎಂದು ಮಹಮದ್ ಗೌಸ್ಗೆ ಮಾನಸಿಕವಾಗಿ ಚಿತ್ರಹಿಂಸೆ ಮಾಡ್ತಿದ್ರು ಎನ್ನಲಾಗಿದೆ.
ಇದ್ರಿಂದ ಮನನೊಂದಿದ್ದ ಮಹಮದ್ ಗೌಸ್, ಕಡೆಗೆ ಎರಡು ಹೆಣ್ಣು ಮಕ್ಕಳಿರುವ ವಿಧವೆ ನೂರ್ ಅಬ್ಜಾರನ್ನು ಅ.17ರಂದು ಮೈಸೂರಿಗೆ ಕರೆದುಕೊಂಡು ಹೋಗಿ ಮದ್ವೆಯಾಗಿದ್ದಾರೆ.
ಮದುವೆ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗೌಸ್ ಅವರ ಮೊದಲ ಪತ್ನಿ ಮತ್ತು ಮಕ್ಕಳು ನಡುರಸ್ತೆಯಲ್ಲೇ ಎರಡನೇ ಪತ್ನಿ ಅಬ್ಜಾಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾಳೆ.
ಮನೆ ಖಾಲಿ ಮಾಡುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು.ಈ ಸಂಬಂಧ ನಾಗಮಂಗಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಾಗಿದೆ.