Top

ಶಬರಿಮಲೆ ಪ್ರವೇಶ ಬಂದ್: ಅಸಾಧ್ಯವಾದ ಮಹಿಳೆಯರ ಪ್ರವೇಶ

ಶಬರಿಮಲೆ ಪ್ರವೇಶ ಬಂದ್: ಅಸಾಧ್ಯವಾದ ಮಹಿಳೆಯರ ಪ್ರವೇಶ
X

ಸುಪ್ರೀಂಕೋರ್ಟ್ ತೀರ್ಪಿನ ನಂತರ ಮೊದಲ ಬಾರಿ ತೆರೆದಿದ್ದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಮಾಸಿಕ ಪೂಜೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಾಗಿಲು ಹಾಕಲಾಯಿತು.

ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ಬಾರಿ 10ರಿಂದ 50 ವರ್ಷದೊಳಗಿನ ಒಟ್ಟಾರೆ 12 ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಯತ್ನಿಸಿದರು. ಆದರೆ ಯಾರೊಬ್ಬರು ಯಶಸ್ಸು ಸಾಧಿಸಲಿಲ್ಲ. ಈ ಮೂಲಕ ಇತಿಹಾಸ ನಿರ್ಮಿಸಲು ಈ ಬಾರಿ ಮಹಿಳೆಯರಿಗೆ ಸಾಧ್ಯವಾಗಲಿಲ್ಲ.

ಶಬರಿಮಲೆ ಅಯ್ಯಪ್ಪ ದೇವಸ್ಥಾನ 5 ದಿನಗಳ ಕಾಲ ತೆರೆದಿದ್ದು, ಮೂಲ ಜಾಗವಾದ ಪಂಪ ನದಿಯ ಬಳಿ ಭಕ್ತರು ಮಹಿಳೆಯರನ್ನು ತಡೆಯುವಲ್ಲಿ ಯಶಸ್ವಿಯಾದರು. ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟಾರೆ 12 ಮಹಿಳೆಯರು ಬೆಟ್ಟ ಏರಲು ವಿಫಲ ಪ್ರಯತ್ನ ನಡೆಸಿದ್ದಾರೆ. ಕೆಲವು ಮಹಿಳೆಯರು ಕೇವಲ 200 ಮೀ. ದೂರದವರೆಗೂ ಸಾಗಿದ್ದರೂ 18 ಮೆಟ್ಟಲು ತಲುಪುವಲ್ಲಿ ವಿಫಲರಾದರು.

ಮೂಲ ಸ್ಥಳವಾದ ಪಂಪ ನದಿಯಿಂದ ಸುಮಾರು 20 ಕಿ.ಮೀ.ದೂರದವರೆಗೆ ಬೆಟ್ಟ ಇದ್ದು, ಕೇರಳ ಪೊಲೀಸರು ಬಿಗಿ ಭದ್ರತೆ ನಡುವೆ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಿದರೂ. ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ. ಇದರಿಂದ ಮಹಿಳೆಯರ ಎಲ್ಲಾ ಪ್ರಯತ್ನ ವಿಫಲವಾಯಿತು.

Next Story

RELATED STORIES