ಉಸಿರಾಡುತ್ತಿದೆಯಂತೆ 70 ವರ್ಷ ಹಳೆಯದಾದ ಗೋರಿ..!

X
TV5 Kannada22 Oct 2018 1:56 AM GMT
ರಾಯಚೂರು: ರಾಯಚೂರಿನಲ್ಲಿ ಅಚ್ಚರಿಯ ಘಟನೆಯೊಂದು ಜರುಗಿದ್ದು, ವಿಸ್ಮಯದ ರೀತಿಯಲ್ಲಿ ಗೋರಿಗಳು ಉಸಿರಾಡುತ್ತಿದೆ. ಇದನ್ನು ನೋಡಲು ಅಕ್ಕಪಕ್ಕದ ಊರಿನವರಲ್ಲದೇ, ಹೊರದೇಶದಿಂದ ಮುಸ್ಲಿಂ ಧರ್ಮಗುರುಗಳು ಆಗಮಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಈ ವಿಸ್ಮಯ ನಡೆದಿದ್ದು, ಹಜರತ್ ಸೈಯದ್ ಶಾಹ ನಾಸಿರುದ್ದೀನ್ ಗೋರಿಗಳು ಉಸಿರಾಡತೊಡಗಿದೆ.
ಕಳೆದ ಐದು ದಿನಗಳಿಂದ ಈ ಅಚ್ಚರಿ ನಡೆಯತೊಡಗಿದ್ದು, ಅಚ್ಚರಿಯನ್ನ ನೋಡಲು ಸುತ್ತಮುತ್ತಲ ಗ್ರಾಮಗಳಲ್ಲದೇ ದೇಶ ವಿದೇಶಗಳಿಂದ ಸಾವಿರಾರು ಜನರ ಆಗಮಿಸುತ್ತಿದ್ದಾರೆ.
ಗೋರಿ ನೋಡಲು ಲಂಡನ್ ಮತ್ತು ಆಫ್ರಿಕಾದಿಂದ ಧರ್ಮಗುರುಗಳು ಆಗಮಿಸಿದ್ದು, ಸುಮಾರು 70 ವರ್ಷಗಳ ಕಾಲ ಹಳೆಯದಾಗಿರುವ ಗೋರಿ ಉಸಿರಾಡತೊಡಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ 60 ವರ್ಷಗಳಿಂದ ಈ ಗೋರಿಗಳಿಗೆ ಉರುಸ್ ಮಾಡಲಾಗುತ್ತಿದೆ.
Next Story