Top

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಗೆಲುವು

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಗೆಲುವು
X

ಗುವಾಹಟಿ: ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.

ಇಲ್ಲಿನ ಬರ್ಸಾಪಾರಾ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರನ್ ಮಳೆಯನ್ನೇ ಸುರಿಸಿ ಶತಕ ಜೊತೆಯಾಟ ನೀಡಿದ್ರು.

ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಎರಡನೇ ವಿಕೆಟ್‍ಗೆ ಬರೋಬ್ಬರಿ 246 ರನ್‍ಗಳ ಜೊತೆಯಾಟ ಆಡಿ ತಂಡಕ್ಕೆ ದೊಡ್ಡ ಗೆಲುವು ತಂದುಕೊಟ್ಟಿತ್ತು.

ವಿರಾಟ್ ಕೊಹ್ಲಿ 140, ರೋಹಿತ್ ಶರ್ಮಾ ಅಜೇಯ 152, ಅಂಬಾಟಿ ರಾಯ್ಡು ಅಜೇಯ 22 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಭಾರತ 42.1 ಓವರ್‍ಗಳಲ್ಲಿ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪರ ಶೆಮ್ರೋನ್ ಹೀಟ್ಮರ್ ಆಕರ್ಷಕ ಶತಕ ಬಾರಿಸಿ ಕೊಹ್ಲಿ ಪಡೆಗೆ ಭಾರೀ ಸವಾಲನ್ನೇ ನೀಡಿದ್ರು.

ಕಿರಾನ್ ಪೊವೆಲ್ 51, ಜೆಸನ್ ಹೋಲ್ಡರ್ 38, ಬಿಶೂ ಅಜೇಯ 22, ಕೇಮಾರ್ ರೋಚ್ ಅಜೇಯ 26 ರನ್ ಬಾರಿಸಿದ್ರು. ಟೀಂ ಇಂಡಿಯಾ ಪರ ಯಜುವೇಂದ್ರ ಚಹಲ್ 3 ವಿಕೆಟ್, ಮೊಹ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದ್ರು. ಖಲೀಲ್ ಅಹ್ಮದ್ 1 ವಿಕೆಟ್ ಪಡೆದ್ರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್ ನಿಗದಿತ ಓವರ್‍ನಲ್ಲಿ 322/8

ಹೇಟ್ಮರ್ 106, ಕಿರಾನ್ ಪೊವೆಲ್ 51

ಯುಜುವೇಂದ್ರ ಚಹಲ್ 41ಕ್ಕೆ 3, ರವೀಂದ್ರ ಜಡೇಜಾ 66ಕ್ಕೆ 2

ಟೀಂ ಇಂಡಿಯಾ 326/2 (42.1 ಓವರ್)

ರೋಹಿತ್ ಶರ್ಮಾ 152, ವಿರಾಟ್ ಕೊಹ್ಲಿ 140

ಥಾಮಸ್ 83ಕ್ಕೆ1, ಬಿಶೂ 72ಕ್ಕೆ 1

Next Story

RELATED STORIES