Top

ಶೃತಿ ಹರಿಹರನ್‌ಗೆ ನಟಿಮಣಿಯರ ಬೆಂಬಲಗಳ ಸುರಿಮಳೆ

ಶೃತಿ ಹರಿಹರನ್‌ಗೆ ನಟಿಮಣಿಯರ ಬೆಂಬಲಗಳ ಸುರಿಮಳೆ
X

ನಟ ಅರ್ಜುನ್ ಸರ್ಜಾ ವಿರುದ್ಧ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್‌ಗೆ ಸ್ಯಾಂಡಲ್‌ವುಡ್‌ನ ಹಲವು ನಟಿ ಮಣಿಯರು ಬೆಂಬಲ ನೀಡಿದ್ದಾರೆ.

ಶೃತಿ ಪರ ಬ್ಯಾಟಿಂಗ್ ಮಾಡಿರುವ ಸೋನು ಗೌಡ, ಪ್ರತಿ ಬಾರಿಯೂ ಸಾಕ್ಷಿ ನೀಡಲು ಸಾಧ್ಯವಾಗೋದಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಎಮೋಷನ್, ನೋವು ತುಂಬಾ ಇರುತ್ತೆ. ಅವರ ಫೀಲಿಂಗ್ಸ್‌ನ್ನ ಗೌರವಿಸೋಣ. ಏನೇನೋ ಹೇಳೋದ್ರ ಮೂಲಕ ಅವರಿಗೆ ಮತ್ತೆ ನೋವುಂಟು ಮಾಡೋದು ಬೇಡ. ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ಗಳೇ ಮೀಟೂಗೆ ಸಪೋರ್ಟ್ ಮಾಡ್ತಿದ್ದಾರೆ.

ಅಮಿತಾಬ್,ಅಕ್ಷಯ್ ಕುಮಾರ್ ಅಂಥವ್ರೆ ಇದಕ್ಕೆ ಸಪೋರ್ಟ್ ಮಾಡ್ತಾ ಇರ್ಬೇಕಾದ್ರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯಾರೋಬ್ರು ಸಪೋರ್ಟ್ಗೆ ನಿಲ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಶೃತಿ ಬೆಂಬಲಕ್ಕೆ ನಿಂತ ನಟಿ ಅವಂತಿಕಾ ಶೆಟ್ಟಿ, ಒಂದು ಚಿತ್ರವನ್ನ ಬಿಟ್ಟು ಎದ್ದು ಬರೋದು ಅಷ್ಟು ಸುಲಭವಲ್ಲ. ಮಾಡಿಕೊಂಡಿರೊ ಕಾಂಟ್ರಾಕ್ಟ್‌ನ್ನ ಹಾಗೆಲ್ಲ ಮುರಿಯೋಕಾಗಲ್ಲ. ಆ ಸಂದರ್ಭದಲ್ಲಿ ಒಬ್ಬ ನಟ ಅಥವಾ ನಟಿಯ ಗಮನ ಚಿತ್ರದ ಚಿತ್ರೀಕರಣದೆಡೆಗೆ ಇರುತ್ತದೆಯೇ ಹೊರತು, ಅದನ್ನ ಹಾಳುಗೆಡವುದರೆಡೆಗೆ ಇರಲ್ಲ ಎಂದು ಹೇಳಿದ್ದಾರೆ.

ಶೃತಿ ಹರಿಹರನ್ ಹೇಳಿದಂತೆ ಕಿರುಕುಳ ಆಗ್ತಿದ್ದಂತೆ‌ ಚಿತ್ರವನ್ನ ಬಿಟ್ಟು ಬರಬಹುದಲ್ಲ ಅನ್ನೋ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದೇಳುತ್ತಿರುವ ಹಿನ್ನೆಲೆ, ಶೃತಿಗೆ ಬೆಂಬಲವಾಗಿ ನಟಿ ಆವಂತಿಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಇನ್ನು ನಟಿ ಮೇಘನಾ ಗಾಂವ್ಕರ್ ಕೂಡ ಶೃತಿ ಹರಿಹರನ್‌ಗೆ ಸಪೋರ್ಟ್ ಮಾಡಿದ್ದಾರೆ. ಇದು ಪ್ರತಿಯೊಬ್ಬರ ಮೂಲಭೂತ ಹಕ್ಕು. ನೀವು ಕೆಲಸ‌ ಕೇಳಲಿ, ಅವರೇ ನಿಮಗೆ‌ ಕೆಲಸ ಕೊಡಲಿ, ಅಥವಾ ನೀವು ಯಾವುದೇ ಕೆಲಸದಲ್ಲಿರಲಿ, ಅಲ್ಲೆಲ್ಲ ಸುಮ್ನಿದ್ಬಿಡು, ಯಾರಿಗೂ ಹೇಳ್ಬೇಡ ಅನ್ನೊ ವಾತಾವರಣ ತೊಲಗಬೇಕು. ತಪ್ಪು ಮಾಡಿದವರು ಅದೆಂಥ ದೊಡ್ಡವರೇ ಆದ್ರು ಅದು ತಪ್ಪೇ. ಎಂದು ಬರೆದುಕೊಂಡಿರೊ ಮೇಘನ ಗಾಂವ್ಕರ್ ಟ್ವೀಟ್ ಮಾಡಿದ್ದಾರೆ.

Next Story

RELATED STORIES