Top

ಸಿನಿಮಾದಲ್ಲಿ ಪೊಲೀಸ್ ಆಗಬೇಕಾದರೆ ಇನ್ಮೇಲೆ ಅನುಮತಿ ಬೇಕು!

ಸಿನಿಮಾದಲ್ಲಿ ಪೊಲೀಸ್ ಆಗಬೇಕಾದರೆ ಇನ್ಮೇಲೆ ಅನುಮತಿ ಬೇಕು!
X

ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪೊಲೀಸರನ್ನು ಅಮಾಯಕರಿಂದ ಹಣ ವಸೂಲಿ ಮಾಡುವಂತೆ ಬಿಂಬಿಸುವುದು ಮತ್ತು ಪ್ರಭಾವಿಗಳ ಪರ ಕೆಲಸ ಮಾಡುವುದು, ಅಪರಾಧ ನಡೆದ ನಂತರ ಸ್ಥಳಕ್ಕೆ ಬರುವುದು ಹೇಗೆ ಹಲವು ರೀತಿಯಲ್ಲಿ ಕೆಟ್ಟದಾಗಿ ಸಿನಿಮಾಗಳಲ್ಲಿ ಬಿಂಬಿಸುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಮಹಿಳಾ ಸಿಬ್ಬಂದಿಗೆ ಪ್ಯಾಂಟ್, ಶರ್ಟ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಆದೇಶ ಬಂದಿದ್ದು ಇದೀಗ ಇದರ ಬೆನ್ನಲ್ಲೇ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪೊಲೀಸ್ ಪಾತ್ರ ಮಾಡಲು ಅನುಮತಿ ಪಡೆಯುವುದು ಕಡ್ಡಾಯ ಮಾಡಬೇಕೆಂದು ಗೃಹ ಸಚಿವರಿಂದ ಡಿಜಿ ಮತ್ತು ಐಜಿಪಿ ಅವರಿಗೆ ಕಡತ ರವಾನೆ ಮಾಡಲಾಗಿದೆ.

ಇದೀಗ ಡಿಜಿ ಮತ್ತು ಐಜಿಪಿ ಕಡತವನ್ನು ಡಿಜಿಪಿ ನೀಲಮಣಿ ಎನ್ ರಾಜು ಅವರಿಗೆ ರವಾನೆ ಮಾಡಿದ್ದು, ನೀಲಮಣಿ ಎನ್ ರಾಜು ಪರಿಶೀಲನೆ ನಡೆಸಿ ಸಾಧ್ಯವದರೆ ಕಾನೂನಿನ ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

Next Story

RELATED STORIES