Top

ವಿಶ್ವಕಪ್ ಸೇರಿ 15 ಪಂದ್ಯಗಳು ಫಿಕ್ಸ್​! ಭೂಗತ ನಂಟು..

ವಿಶ್ವಕಪ್ ಸೇರಿ 15 ಪಂದ್ಯಗಳು ಫಿಕ್ಸ್​! ಭೂಗತ ನಂಟು..
X

ಭಾರತ ಮತ್ತು ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್​, ವಿಶ್ವಕಪ್ ಟಿ-20 ಪಂದ್ಯ ಸೇರಿದಂತೆ 15 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಫಿಕ್ಸ್ ಆಗಿದ್ದವು ಎಂಬುದನ್ನು ಬುಕ್ಕಿಯೊಬ್ಬ ಕುಟುಕು ಕಾರ್ಯಾಚರಣೆಯಲ್ಲಿ ಬಾಯಿಬಿಟ್ಟಿದ್ದಾನೆ!

ಅಲ್​ಜಾಹಿರಾ ಟೀವಿ ಸಂಸ್ಥೆ ನಡೆಸಿದ ಕುಟುಕು ಕಾರ್ಯಾಚರಣೆಯ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬುಕ್ಕಿ ಅನೀಲ್ ಮುನ್ವಾರ್, 6 ಏಕದಿನ, 6 ಟೆಸ್ಟ್ ಹಾಗೂ 3 ವಿಶ್ವಕಪ್ ಟಿ-20 ಪಂದ್ಯಗಳಲ್ಲಿ 26 ಬಾರಿ ನೀಡಿದ್ದ ಸುಳಿವುಗಳ ಪೈಕಿ 25 ನಿಜವಾಗಿವೆ.

ಭಾನುವಾರ ಸಂಜೆ ಈ ಕುಟುಕು ಕಾರ್ಯಾಚರಣೆಯ ಡಾಕ್ಯುಮೆಂಟರಿಗೆ ಕ್ರಿಕೆಟರ್ಸ್ ಮ್ಯಾಚ್ ಫಿಕ್ಸರ್ಸ್: ದಿ ಮುನ್ವಾರ್ ಫೈನಲ್ಸ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪಾಕಿಸ್ತಾನದ ಆಟಗಾರನೊಬ್ಬ ಫಿಕ್ಸಿಂಗ್ ಕುರಿತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಮಾತುಕತೆ ನಡೆಸಿರುವುದು ಕೂಡ ಬೆಳಕಿಗೆ ಬಂದಿದೆ.

ಫಿಕ್ಸಿಂಗ್​ನಲ್ಲಿ ಇಂಗ್ಲೆಂಡ್​ನ 7 ಆಸ್ಟ್ರೇಲಿಯಾದ 5 ಮತ್ತು ಪಾಕಿಸ್ತಾನದ ಮೂವರು ಆಟಗಾರರು ಹಾಗೂ ಒಂದು ದೇಶದ (ಯಾವ ದೇಶ ಎಂದು ಉಲ್ಲೇಖಿಸಿಲ್ಲ) ಒಬ್ಬ ಆಟಗಾರ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

2011ರಲ್ಲಿ ಲಾರ್ಡ್ಸ್​ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಹಾಗೂ ಕೇಪ್​ಟೌನ್​ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್, 2011ರ ವಿಶ್ವಕಪ್​ನ 5 ಪಂದ್ಯ ಹಾಗೂ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಟಿ-20ನ 3 ಪಂದ್ಯದಲ್ಲೂ ಸ್ಪಾಟ್ ಫಿಕ್ಸಿಂಗ್ ಕರಿನೆರಳು ಬಿದ್ದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2012ರಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ನಡೆದ ಸರಣಿಯ ಮೂರು ಪಂದ್ಯ ಕೂಡ ಫಿಕ್ಸಿಂಗ್ ಆಗಿತ್ತು. ಈ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರನೊಬ್ಬ ಡಿ-ಕಂಪನಿಯ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.

Next Story

RELATED STORIES