Top

ಮತ್ತೆ ನಟ ಸುನಾಮಿ ಕಿಟ್ಟಿ ಪುಂಡಾಟ...!

ಮತ್ತೆ ನಟ ಸುನಾಮಿ ಕಿಟ್ಟಿ ಪುಂಡಾಟ...!
X

ಬೆಂಗಳೂರು: ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತೆ ತಮ್ಮ ಪುಂಡಾಟ ಮುಂದುವರೆಸಿದ್ದಾರೆ. ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ಗೂಂಡಾಗಿರಿ ನಡೆಸಿದ್ದು, ಕುಡಿದ ಮತ್ತಿನಲ್ಲಿ ಸುನಾಮಿ ಕಿಟ್ಟಿ ಪಬ್ ಸಿಬ್ಬಂದಿಗಳಿಗೆ ಥಳಿಸಿದ್ದಾರೆ.

ಒರಾಯನ್ ಮಾಲ್‌ ಹೈ ಲಾಂಚ್ ಪಬ್‌ನಲ್ಲಿ ಗೂಂಡಾಗಿರಿ ನಡೆಸಿದ ಸುನಾಮಿ ಕಿಟ್ಟಿ, ಸಿಗರೇಟ್ ವಿಚಾರವಾಗಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ ಸುನಾಮಿ ಕಿಟ್ಟಿ, ಸಿಂಗಲ್ ಸಿಗರೇಟ್ ಕೇಳಿದ್ದಾರೆ. ಸಿಂಗಲ್ ಸಿಗರೇಟ್ ಸಿಗಲ್ಲ. ಪ್ಯಾಕ್ ತೆಗೆದುಕೊಳ್ಳುವಂತೆ ಸಿಬ್ಬಂದಿ ಹೇಳಿದ್ದು, ಈ ವೇಳೆ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ‌ಯಾಗಿದೆ.

ಕೋಪಗೊಂಡ ಸುನಾಮಿ ಕಿಟ್ಟಿ ಹೈ ಲಾಂಚ್ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ರೆ ಪಬ್ ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ. ಕಿಟ್ಟಿ ಜೊತೆ ರಾಜಿ ಸಂಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ .ಈ ಹಿಂದೆ ಕಿಡ್ನ್ಯಾಪ್ ಕೇಸ್‌ನಲ್ಲಿ ಜ್ಞಾನಭಾರತಿ ಠಾಣೆಯಲ್ಲಿ ಕಿಟ್ಟಿ ಅರೆಸ್ಟ್ ಆಗಿದ್ದರು.

Next Story

RELATED STORIES