Top

ಗೌಡರ ಕುಟುಂಬಕ್ಕೆ ನಾನು ಸಪೋರ್ಟ್ ಮಾಡಲ್ಲ- ಎ.ಮಂಜು

ಗೌಡರ ಕುಟುಂಬಕ್ಕೆ ನಾನು ಸಪೋರ್ಟ್ ಮಾಡಲ್ಲ- ಎ.ಮಂಜು
X

ಹಾಸನ: ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ, ಹಾಸನದ ಕಾಂಗ್ರೆಸ್ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಎ.ಮಂಜು ವಾಗ್ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಮಾತನಾಡಿದ ಎ. ಮಂಜು, ನಾನು ದೇವೇಗೌಡರ ಕುಟುಂಬದ ವಿರೋಧಿ, ಹಿಂದಿಗಿಂತಲೂ ಗೌಡರ ಕುಟುಂಬದವನ್ನು ವಿರೋಧಿಸಿಕೊಂಡು ಬಂದವನು. ಈಗಲೂ ಅದನ್ನೇ ಮುಂದುವರೆಸುತ್ತೇನೆ. ನಾನು ನನ್ನ ಕಾರ್ಯಕರ್ತರನ್ನು ಉಳಿಸಬೇಕಿದೆ. ಇದು ನನ್ನ ವಯಕ್ತಿಕ ಕಾರ್ಯಕರ್ತರ ಕೂಗು ಎಂದಿದ್ದಾರೆ.

ಅಲ್ಲದೇ, ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದವನು ನಾನು, ಪ್ರಜ್ವಲ್ ನಿಂತುಕೊಂಡರೆ ನನಗೇನು..? ಗೌಡರ ಕುಟುಂಬಕ್ಕೆ ಈ ಬಾರಿ ನನ್ನ ಸಪೋರ್ಟ್ ಇರುವುದಿಲ್ಲ ಎಂದಿದ್ದಾರೆ.

ತಾಲೂಕಿನಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದರೆ, ಅಂಥವರನ್ನು ತಾಲೂಕು ಮತ್ತು ಜಿಲ್ಲೆಯಿಂದಲೇ ಹೊರಗಡೆ ಕಳುಹಿಸಬೇಕಿದೆ ಎಂದು ಹೇಳುವ ಮೂಲಕ ಎ.ಮಂಜು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿಗೂ ಟಾಂಗ್ ನೀಡಿದ್ದಾರೆ.

Next Story

RELATED STORIES