Top

4 ವರ್ಷದಲ್ಲಿ ಶೇ.60ರಷ್ಟು ಹೆಚ್ಚಾದ ಕೋಟ್ಯಾಧಿಪತಿಗಳು!

4 ವರ್ಷದಲ್ಲಿ ಶೇ.60ರಷ್ಟು ಹೆಚ್ಚಾದ ಕೋಟ್ಯಾಧಿಪತಿಗಳು!
X

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.

ನೇರ ತೆರಿಗೆ ಮಂಡಳಿ ಸೋಮವಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ವಾರ್ಷಿಕ 1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವ ನೇರ ತೆರಿಗೆ ಪಾವತಿಸುವವರ ಸಂಖ್ಯೆ ಕಳೆದ 4 ವರ್ಷದಲ್ಲಿ 1.40 ಲಕ್ಷ ಏರಿಕೆಯಾಗಿದೆ.

ವೈಯಕ್ತಿಕ ಆದಾಯ ಗಳಿಕೆಯಲ್ಲಿ 1 ಕೋಟಿ ರೂ. ದಾಟಿದವರ ಸಂಖ್ಯೆ ಶೇ.68ರಷ್ಟು ಏರಿಕೆಯಾಗಿದೆ. ಇದರಲ್ಲಿ ಕಾರ್ಪೊರೇಟ್ ಹುದ್ದೆಯಲ್ಲಿರುವವರು, ಉದ್ಯಮಿಗಳು ಹಾಗೂ ಅವಿಭಕ್ತ ಕುಟುಂಬದವರು ಸೇರಿದ್ದಾರೆ.

2014-15ರಲ್ಲಿ 88,649 ಮಂದಿ ತೆರಿಗೆ ಇಲಾಖೆಯಲ್ಲಿ ತಮ್ಮ ಆದಾಯ 1 ಕೋಟಿ ರೂ. ದಾಟಿರುವುದನ್ನು ಘೋಷಿಸಿಕೊಂಡಿದ್ದಾರೆ. 2017-18ರಲ್ಲಿ 1,40,139 ಮಂದಿ ಈ ಸಾಲಿಗೆ ಸೇರಿದ್ದಾರೆ ಎಂದು ವರದಿಯಲ್ಲಿ ಅಂಕಿ-ಅಂಶ ನೀಡಲಾಗಿದೆ.

Next Story

RELATED STORIES