Top

ಇಂದು ತೋಂಟದಾರ್ಯ ಶ್ರೀಗಳ ಅಂತ್ಯ ಸಂಸ್ಕಾರ

ಇಂದು ತೋಂಟದಾರ್ಯ ಶ್ರೀಗಳ ಅಂತ್ಯ ಸಂಸ್ಕಾರ
X

ಗದಗ: ಗದಗಿನ ತೋಂಟದಾರ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿಧಿವಶರಾದ ಹಿನ್ನೆಲೆ, ಶ್ರೀಗಳ ಪಾರ್ಥೀವ ಶರೀರವನ್ನು ನಿನ್ನೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಸ್ವಾಮೀಜಿಗಳ ಪಾರ್ಥೀವ ಶರೀರ ಇರಿಸಲಾಗಿದ್ದು, ತದನಂತರ ಡಂಬಳದ ತೋಂಟದಾರ್ಯ ಮೂಲ ಮಠಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಯಿತು. ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

https://www.youtube.com/watch?v=E4p4vn3b6K4

ಇಂದು 11ಗಂಟೆಯವರೆಗೂ ಗದುಗಿನ ಮಠದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ನಂತರ ಗದುಗಿನ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥೀವ ಶರೀರ ಮೆರವಣಿಗೆ ಮಾಡಲಾಗುವುದು. ನಂತರ ನಾಲ್ಕು ಗಂಟೆಗೆ ಅಂತ್ಯ ಸಂಸ್ಕಾರ ಮಾಡಲಾಗುವುದು.

Next Story

RELATED STORIES