Top

ಸೂಕ್ತ ಸಮಯದಲ್ಲಿ ಸಾಕ್ಷಿ ಬಿಡುಗಡೆ: ಶ್ರುತಿ ಹರಿಹರನ್

ಸೂಕ್ತ ಸಮಯದಲ್ಲಿ ಸಾಕ್ಷಿ ಬಿಡುಗಡೆ: ಶ್ರುತಿ ಹರಿಹರನ್
X

ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡ ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಸಾಕ್ಷಿಗಳನ್ನು ಬಿಡುಗಡೆ ಮಾಡುವುದಾಗಿ ನಟಿ ಶ್ರುತಿ ಹರಿಹರನ್ ತಿಳಿಸಿದ್ದಾರೆ

ಬೆಂಗಳೂರಿನಲ್ಲಿ ಫೈರ್ ಸಂಘಟನೆಯ ಪದಧಿಕಾರಿಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಶ್ರುತಿ ಹರಿಹರನ್​, ನನ್ನನ್ನು ಅರ್ಜುನ್ ಸರ್ಜಾ ಡಿನ್ನರ್ , ರೆಸಾರ್ಟ್​ಗೆ ಕರೆದಿದ್ದು ಸತ್ಯ. ನನಗೆ ಆಗ ಧೈರ್ಯ ಇರಲಿಲ್ಲ ಈ ಮೀಟೂ ಅಭಿಯಾನದ ಮೂಲಕ ದೈರ್ಯ ಬಂದಿದ್ದು, ಈಗ ನನ್ನ ಸಮಸ್ಯೆ ಹೇಳಕೊಂಡಿದ್ದೇನೆ ಎಂದರು.

ಈ ವಿಚಾರವಾಗಿ ಸರ್ಜಾ ಕುಟುಂಬದವರ ಜೊತೆ ಮಾತುಕತೆ ನಡೆಸಲು ಸಿದ್ಧ. ಆದರೆ ಅವರೇ ಮುಂದೆ ಬರಬೇಕು. ನ್ಯಾಯಾಲಯ, ಹಾಗೂ ಐಸಿಸಿಯಲ್ಲಿ ದೂರು ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಸೂಕ್ತ ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ ಶ್ರುತಿ ತಿಳಿಸಿದರು.

ನನಗೆ ಚಿತ್ರರಂಗದಲ್ಲಿ ಇತರ ಯಾವುದೇ ನಟರಿಂದ ತೊಂದರೆಯಾಗಿಲ್ಲ. ಆದರೆ ಹಿರಿಯ ನಟ ಅರ್ಜುನ್ ಸರ್ಜಾ ಮಾತ್ರವೇ ಹೀಗೆ ನಡೆದುಕೊಂಡಿದ್ದಾರೆ. ಅವರ ಅಭಿಮಾನಿಗಳಿಂದ ನನಗೆ ಬೆದರಿಕೆ ಇದೆ ಎಂದು ಶ್ರುತಿ ಆರೋಪಿಸಿದರು.

https://www.youtube.com/watch?v=q7RMn0CyLRk

ನಂತರ ಮಾತನಾಡಿದ ನಟ ಚೇತನ್, ಲೈಂಗಿಕ ಕಿರುಕುಳ ಅನ್ನೋದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದಲ್ಲ ಇಡೀ ಚಿತ್ರರಂಗಕ್ಕೆ ಇದೊಂದು ಖಾಯಿಲೆ ಈ ಖಾಯಿಲೆಯನ್ನು ನಿರ್ಮೂಲನೆ ಮಾಡುವ ಅವಶ್ಯಕತೆ ಇದೆ, ನಾಲ್ಕು ವರ್ಷಗಳ ಹಿಂದೆಯೇ ನಿರ್ದೇಶಕರು ಮತ್ತು ಮಹಿಳೆಯರ ನಡುವೆ ನಡೆದ ಲೈಂಗಿಕ ಕಿರುಕಳ ಪ್ರಕರಣವನ್ನು ಮಾಧ್ಯಮ ಬಯಲಿಗೆಳೆದಿತ್ತು ಆಗಲೇ ಅದಕ್ಕೊಂದು ರಚನಾತ್ಮಕ ಪರಿಹಾರ ಬೇಕೆಂದು ನಾನು ಲೇಖನ ಬರೆದು ಪ್ರಯತ್ನಿಸಿದ್ದೆ ಆದರೆ ಯಾರೂ ನನಗೆ ಬೆಂಬಲ ಕೊಡಲಿಲ್ಲ ಎಂದು ಮಾತನಾಡಿದರು.

ಮೀಟೂನ ಕೆಲವು ಹುಡುಗಿಯರೂ ದುರ್ಬಳಕೆ ಮಾಡಿಕೊಂಡಿರಬಹುದು. ನಮಗೆ ಲೈಂಗಿಕ ಕಿರುಕುಳ ಆದ ತಕ್ಷಣ ಹೇಳೋಕ್ ಆಗಲ್ಲ, ಎಲ್ಲದಕ್ಕೂ ಪ್ರೂಫ್ ಇರಲೇ ಬೇಕೆಂದೆನಿಲ್ಲ ಸಿಸಿ ಕ್ಯಾಮರ ಹಾಕಿಕೊಂಡೇ ದೌರ್ಜನ್ಯ ಮಾಡಲ್ಲ ರೂಪ ಅಯ್ಯರ್ ಹೇಳಿದರು.

ನಾನು ಚಿತ್ರರಂಗದಿಂದ ದೂರ ಹೋಗಿರಬಹುದು ಆದರೆ ನಾನು ಚಿತ್ರರಂಗದವಳೇ ಮೀಟು ಬರೋದಕ್ಕು ಮೊದಲೇ ಈ ಸಂಸ್ಥೆ ಬಂದಿದೆ. ನನ್ನ ಅಜ್ಜಿ ಸೈಲೆಂಟ್ ಮೂವಿನಲ್ಲಿ ಮಾಡಿದರು. ಅವತ್ತು ಹೆಣ್ಣಿನ ಮೇಲೆ ಶೋಷಣೆ ಇತ್ತು, ದಿಟ್ಟ ತನದಿಂದ ಬಂದ ಹೆಣ್ಣಿಗೆ ಸಪೋರ್ಟ್ ಮಾಡಬೇಕು ಎಂದು ನಟಿ ಪಂಚಮಿ ಮಾತನಾಡಿದರು.

Next Story

RELATED STORIES