Top

ತೋಂಟದಾರ್ಯ ಮಠದ ಉತ್ತರಾಧಿಕಾರಿ ಸಿದ್ದರಾಮ ಸ್ವಾಮೀಜಿ!

ತೋಂಟದಾರ್ಯ ಮಠದ ಉತ್ತರಾಧಿಕಾರಿ ಸಿದ್ದರಾಮ ಸ್ವಾಮೀಜಿ!
X

ಗದಗದ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಜಿ ಲಿಂಗ್ಯಕ್ಯರಾದ ಹಿನ್ನೆಲೆಯಲ್ಲಿ ನಾಗನೂರ ಮಠದ ಸಿದ್ದರಾಮ ಸ್ವಾಮೀಜಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಶನಿವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಠದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಸಿದ್ದಲಿಂಗ ಸ್ವಾಮೀಜಿ 15 ವರ್ಷಗಳ ಹಿಂದೆಯೇ ಅಂದರೆ 60ನೇ ವಯಸ್ಸಿನಲ್ಲಿಯೇ ತಮ್ಮ ಉತ್ತರಾಧಿಕಾರಿಯ ನೇಮಕ ಪತ್ರ ಬರೆದಿದ್ದರು. ಈ ಪತ್ರವನ್ನು ಆನಂದ ಮಲ್ಲಿಕಾರ್ಜುನ ಸ್ವಾಮೀಜಿ ಪ್ರದರ್ಶಿಸಿದರು.

ಸಿದ್ದಲಿಂಗ ಸ್ವಾಮೀಜಿ ಅವರ ಅಭಿಪ್ರಾಯದ ಮೇರೆಗೆ ಶ್ರಿ ನಾಗನೂರ ಮಠದ ಸಿದ್ದರಾಮ ಸ್ವಾಮಿಜಿ ಅವರನ್ನು ಉತ್ತರಾಧಿಕಾರಿಯಾಗಿ ಘೊಷಣೆ ಮಾಡಲಾಗಿದ್ದು, ಮಠದ 20ನೇ ಪಾಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅಡ್ನೂರು ಸ್ವಾಮಿಜಿ, ಶಿವಕುಮಾರ ಸಿದ್ದಲಿಂಗ ಮಹಾಸ್ವಾಮಿ, ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ನಾಡಿನ ಹಲವಾರು ಗಣ್ಯರು ಹಾಗೂ ವಿವಿಧ ಮಠಾಧಿಶರು ಸಿದ್ದಲಿಂಗ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು.

Next Story

RELATED STORIES