Top

ಭಕ್ತರ ಕಂಬನಿ ನಡುವೆ ಸಿದ್ದಲಿಂಗ ಶ್ರೀಗಳ ಅಂತ್ಯಕ್ರಿಯೆ

ಭಕ್ತರ ಕಂಬನಿ ನಡುವೆ ಸಿದ್ದಲಿಂಗ ಶ್ರೀಗಳ ಅಂತ್ಯಕ್ರಿಯೆ
X

ತೋಂಟದಾರ್ಯ ಶ್ರೀಗಳಾದ ಡಾ. ಸಿದ್ದಲಿಂಗ ಸ್ವಾಮೀಜಿಯವರ ಅಂತ್ಯಕ್ರಿಯೆ ಸಾವಿರಾರು ಭಕ್ತರ ಹಾಗೂ ಅಭಿಮಾನಿಗಳ ಕಂಬನಿಯ ನಡುವೆ ಮಠದ ಆವರಣದಲ್ಲಿ ನೇರವೇರಿತು.

ಬಸವ ಪರಂಪರೆಯಂತೆ ಸಜ್ಜುಗೊಳಿಸಲಾಗಿದ್ದ ಸಮಾಧಿಯಲ್ಲಿ ಶ್ರೀಗಳ ಅಂತ್ಯಸಂಸ್ಕಾರ ಲಿಂಗಾಯತ ಧರ್ಮ ವಿಧಿ ವಿಧಾನದಂತೆ ಜರುಗಿತು. ಪುಷ್ಪ, ವಿಭೂತಿ ಉಂಡೆಗಳುನ್ನು ಅರ್ಪಿಸುವ ಮೂಲಕ ವಿಧಿವಿಧಾನವನ್ನು ಪೂರ್ಣಗೊಳಿಸಲಾಯಿತು.

https://www.youtube.com/watch?v=BmkXHqkgvaQ

ಅಂತ್ಯಸಂಸ್ಕಾರದಲ್ಲಿ ನಾಡಿನ ವಿವಿಧ ಮಠಾಧೀಶರು ಜನಪ್ರತಿನಿಧಿಗಳು ಸಮಾಜದ ಮುಖಂಡರು ಭಾಗಿಯಾಗಿದ್ದರು.

ಅಂತ್ಯಸಂಸ್ಕಾರದ ವೇಳೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಲತೋಪು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳಿಗೆ ನಮನ ಸಲ್ಲಿಸಲಾಯಿತ್ತು,

ಎಲ್ಲಾ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಪಂಚಭೂತಗಳಲ್ಲಿ ತೋಂಟದಾರ್ಯ ಶ್ರೀಗಳು ಮಣ್ಣಲ್ಲಿ ಮಣ್ಣಗಿ ಹೋದರು.

Next Story

RELATED STORIES