Top

ಅರ್ಜುನ್ ಸರ್ಜಾ ಕ್ಷಮೆಯಾಚಿಸಲಿ- ಪ್ರಕಾಶ್ ರೈ

ಅರ್ಜುನ್ ಸರ್ಜಾ ಕ್ಷಮೆಯಾಚಿಸಲಿ- ಪ್ರಕಾಶ್ ರೈ
X

ಅರ್ಜುನ್ ಸರ್ಜಾ ಶೂಟಿಂಗ್ ವೇಳೆ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ರು ಎಂಬ ಶ್ರುತಿ ಹರಿಹರನ್ ಆರೋಪಕ್ಕೆ ನಟ ಪ್ರಕಾಶ್ ರೈ ಬೆಂಬಲ ನೀಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡ ಪ್ರಕಾಶ್ ರೈ, ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ. ದಿಟ್ಟ ಹೆಣ್ಣು. ಅರ್ಜುನ್ ಸರ್ಜ ರವರು ಕನ್ನಡದ ಹೆಮ್ಮೆ. ಹಿರಿಯ ನಟರೂ ಎಂಬುದನ್ನೂ ಮರೆಯದಿರೋಣ.

ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಲ್ಲಿ ಆ ಹೆಣ್ಣು ಅನುಭವಿಸಿದ ಅಸಹಾಯಕತೆ, ಅವಮಾನ ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

https://www.youtube.com/watch?v=jjGhP4zsAis

ಅರ್ಜುನ್ ರವರು ಈ ಆರೋಪವನ್ನು ಅಲ್ಲಗಳೆದರೂ,ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ .

ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣುಮಕ್ಕಳು ತಮ್ಮ ಹಕ್ಕನ್ನು ಅರಿಯದೆ ಇರುವುದೂ ಅಷ್ಟೇ ನಿಜ.

ಪ್ರಸ್ತುತ ಹೆಣ್ಣುಮಕ್ಕಳ ಈ ಮಿ ಟೂ ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯಕ್ಕೆ, ಅವಮಾನಗಳಿಗೆ, ಅಸಹಾಯಕತೆಗೆ, ಕೊನೆಯನ್ನು ಕಾಣಲಿ.

ನಾನು ಶ್ರುತಿ ಹರಿಹರನ್ ರವರ ಪರವಾಗಿ, ಈ ಮೂಲಕ ಏಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

Next Story

RELATED STORIES