ಮತ್ತಿಬ್ಬರು ಮಹಿಳೆಯರ ಪ್ರವೇಶ ಯತ್ನ: ಶಬರಿಮಲೆ ಪ್ರವೇಶ ನಾಳೆ ಬಂದ್

X
TV5 Kannada21 Oct 2018 8:02 AM GMT
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಭಾನುವಾರ ಮತ್ತಿಬ್ಬರು ಮಹಿಳೆಯರ ಯತ್ನವನ್ನು ಭಕ್ತರು ವಿಫಲಗೊಳಿಸಿದ್ದಾರೆ. ಸೋಮವಾರ ದೇವಸ್ಥಾನದ ಬಾಗಿಲು ಮುಚ್ಚಲಿದ್ದು, ಇದುವರೆಗೆ 8 ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ್ದಾರೆ.
50 ವರ್ಷದೊಳಗಿನ ಇಬ್ಬರು ಮಹಿಳೆಯರಾದ ಆಂಧ್ರಪ್ರದೇಶದ ವಾಸಂತಿ (41) ಮತ್ತು ಆದಿಶೇಷಿ (42) ಅವರನ್ನು ಶಬರಿಮಲೆಯ ಮೂಲ ಶಿಬಿರವಾದ ಪಂಪಾ ನದಿ ಬಳಿ ತಡೆಯಲಾಗಿದೆ.
ಮಹಿಳೆಯರು ಆಗಮಿಸುತ್ತಿದ್ದಂತೆ ಪಂಪಾ ನದಿಯ ಬಳಿ ಮಹಿಳೆಯರನ್ನು ಸುತ್ತುವರಿದ ಭಕ್ತರ ಗುಂಪು ಒತ್ತಾಯಪೂರ್ವಕವಾಗಿ ವಾಪಸ್ ಕಳುಹಿಸಿದರು.
ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದವರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತೀರ್ಪು ನೀಡಿದ ನಂತರ ಮೊದಲ ಬಾರಿ ದೇವಸ್ಥಾನದ ಬಾಗಿಲು ತೆರೆದಿದ್ದು, ಇದುವರೆಗೆ 50 ವರ್ಷದೊಳಗಿನ ಕೇವಲ 8 ಮಹಿಳೆಯರು ಮಾತ್ರ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ್ದಾರೆ.
Next Story