Top

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ಸದೆಬಡಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ಸದೆಬಡಿದ ಭಾರತ
X

ಸಾಂಪ್ರದಾಯಿಕ ಎದುರಾಗಳು ಯಾವಾಗ ಎದುರಾದರೂ ಕದನ ಕುತೂಹಲ ಇದ್ದೇ ಇರುತ್ತೆ. ಆದರೆ ಈ ಬಾರಿ ಅಂತಹ ಕುತೂಹಲಗಳೇನಿಲ್ಲ. ಏಕೆಂದರೆ ಇದೀಗ ಭಾರತೀಯ ಆಟಗಾರರು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲೂ ಹಾಟ್ ಫೇವರಿಟ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

ಓಮನ್​ನ ಮಸ್ಕತ್​ನಲ್ಲಿ ಶನಿವಾರ ತಡರಾತ್ರಿ ನಡೆದ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 3-1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದೆ. ನಾಯಕ ಮನ್​ಪ್ರೀತ್ ಸಿಂಗ್ 2 ಗೋಲು ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ತಂಡದ ಆರಂಭ ನಿಧಾನಗತಿಯಲ್ಲಿತ್ತು. ಒಂದು ಹಂತದಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಆದರೆ ಪಂದ್ಯ ಸಾಗುತ್ತಿದ್ದಂತೆ ಚುರಕುಗೊಂಡ ಆಟಗಾರರು ಸತತ ದಾಳಿ ಸಂಘಟಿಸಿದರು.

ಭಾರತದ ಪರ ಮನ್​ಪ್ರೀತ್ ಸಿಂಗ್ (24 ಮತ್ತು 33ನೇ ನಿಮಿಷ) ಎರಡು ಗೋಲು ಸಿಡಿಸಿದರೆ, ದೀಲ್​ಪ್ರೀತ್ (44ನೇ ನಿಮಿಷ) ಒಂದು ಗೋಲು ದಾಖಲಿಸಿದರು. ಪಾಕಿಸ್ತಾನ ಪರ ಜೂನಿಯರ್ ಇರ್ಫಾನ್ (1ನೇ ನಿಮಿಷ) ಆರಂಭದಲ್ಲೇ ಮುನ್ನಡೆ ತಂದುಕೊಟ್ಟರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು.

Next Story

RELATED STORIES