ಇಬ್ಬರು ನಕಲಿ ಪತ್ರಕರ್ತರ ಬಂಧನ

ಅವರು ಸ್ಥಳೀಯ ಪತ್ರಿಕೆಯೂಂದರ ನಕಲಿ ವರದಿಗಾರರು. ಪತ್ರಿಕೆಗೆ ಅದೆಷ್ಟರ ಮಟ್ಟಿಗೆ ಕೆಲಸ ಮಾಡುತ್ತೀದರೂ ಗೊತ್ತಿಲ್ಲ. ಆದರೆ, ಜೇಬು ತುಂಬಿಸಿಕೂಳ್ಳೋದಕ್ಕೆ ಅಸಲಿ ಜಾಗವನ್ನು ನಕಲಿ ಅಂತ ನಂಬಿಸುವುದರಲ್ಲಿ ತುಂಬಾಣೆ ಜಾಣತನ ತೋರಿಸುತ್ತೀದ್ದರು.
ಕೀರ್ತಿ ನಾಯ್ಡು ಮತ್ತು ಸುರೇಶ್ ಇಬ್ಬರು ಸೇರಿ ಪ್ಲಾಸ್ಟಿಕ್ ಗೋಡನ್ ಮಾಲೀಕನನ್ನು ಹೆದರಿಸಿ, 15 ಲಕ್ಷ ವಸೂಲಿ ಮಾಡೋದಕ್ಕೆ ಹೋಗಿ ಇದೀಗ ಪೂಲೀಸರ ಅತಿಥಿಗಳಾಗಿದ್ದಾರೆ.
ಪರಿಸರ ಮಾಲಿನ್ಯ ಎಂಬ ಹೆಸರಿನ ಮಾಸಿಕ ಪತ್ರಿಕೆ ಹೆಸರಿನೊಂದಿಗೆ ಫೀಲ್ಡ್ ಗಿಳಿಯುತ್ತಿದ್ದ ಆರೋಪಿಗಳು ಯಾರನ್ನ ಹೆದರಿಸಿದರೆ, ಸುಲಭವಾಗಿ ಹಣ ವಸೂಲಿ ಮಾಡ್ಬೋದು ಅನ್ನೋದನ್ನ ಕರಗತ ಮಾಡಿಕೊಂಡಿದ್ದರು.
ಕುಂಬಳಗೂಡು ಸಮೀಪದ ಮುಕ್ತಿನಾಗ ದೇವಸ್ಥಾನ ಬಳಿಯಲ್ಲಿ ಪ್ಲಾಸ್ಟಿಕ್ ಗೋಡನ್ ನಡೆಸ್ತಿದ್ದ ಮಧು ಎಂಬಾತನ ಮೇಲೆ ಕಣ್ಣಾಕಿದ್ದಾರೆ. ಹಾಗೆ ಕಣ್ಣಾಕಿದ ಆರೋಪಿಗಳು ಈ ಮಧು ಬಳಿ ಹೋಗಿ ನೀವು ಗೋಡನ್ ಕಟ್ಟಿರೋ ಜಾಗ ಕಾನೂನು ಬಾಹಿರವಾಗಿದೆ. ಅದನ್ನ ಲೀಗಲ್ಲಾಗಿ ಮಾಡಿಸಿಕೊಡ್ತೇವೆ ಅದಕ್ಕೆ ನೀವು 15 ಲಕ್ಷ ರೂಪಾಯಿಗಳನ್ನ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಕಂಗಾಲಾದ ಜಮೀನಿನ ಮಾಲೀಕ ಮಧು ಮೂಲ ಮಾಲೀಕರಾದ ಶಿವಶಂಕರ್ ಬಳಿ ಬಂದು ನಮಗೆ ಅಕ್ರಮವಾಗಿ ಸರ್ಕಾರಿ ಲ್ಯಾಂಡನ್ನ ಮಾರಾಟ ಮಾಡಿದ್ದೀರ ಎಂದು ಗಲಾಟೆ ಮಾಡಿದ್ದಾರೆ.
ನಾವು ಅ ರೀತಿ ಮಾಡಿಲ್ಲ ಸುಳ್ಳು ಹಬ್ಬಿಸ್ತಿರುವರನ್ನು ಕರೆಸಿ ಅಂತ ಮಧೂಗೆ ಸೂಚಿಸಿದ್ದಾರೆ. ಅದರಂತೆ ವಿಜಯನಗರದ ಇಂದ್ರಪ್ರಸ್ಥ ಹೂಟೇಲ್ ಗೆ ಬಂದ ಆರೋಪಿಗಳು ಮಧು ಬಳಿ 15 ಲಕ್ಷ ಹಣ ಕೇಳಿದ್ದು, ಅಲ್ಲದೇ ಜಮೀನಿನ ಮೂಲ ಮಾಲೀಕರಾದ ಶಿವಶಂಕರ್ ಗೆ ವ್ಯವಹಾರದಲ್ಲಿ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
ಇವರಿಬ್ಬರ ನಡವಳಿಕೆಯಲ್ಲಿ ಅನುಮಾನ ಕಾಡೋದಕ್ಕೆ ಶುರುವಾಗಿದ್ದರಿಂದ ಕೂಡಲೇ ಮಧು ರಾಜಾಜಿನಗರ ಪೂಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೂಂಡಿರುವ ಪೂಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.